ನವದೆಹಲಿ: ಅಂಪೈರ್ ತೀರ್ಪು ಮರು ಪರಿಶೀಲನಾ ವ್ಯವಸ್ಥೆ(ಡಿಆರ್‌ಎಸ್) ಅಳವಡಿಕೆಯ ನಂತರ ನಿಖರ ತೀರ್ಪು ಹೊರ ಬರಲು ಸಾಧ್ಯವಾಗಿದೆ ಎಂದು ಐಸಿಸಿ ಪ್ರಧಾನ ಕಾರ್ಯದರ್ಶಿ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.
ಈ ವರ್ಷ ಟೆಸ್ಟ್ ಪಂದ್ಯದ ವೇಳೆ ಅಂಪೈರ್ ಗಳ ನಿರ್ಧಾರಗಳ ನಿಖರತೆ ಶೇ. 94ರಿಂದ ಶೇ.98.5ಕ್ಕೆ ಏರಿಕೆಯಾಗಿದೆ ಎಂದು ಐಸಿಸಿ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದಾರೆ.
ಡಿಆರ್‌ಎಸ್ ಅಳವಡಿಕೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಡಿಆರ್‌ಎಸ್ ಅಳವಡಿಕೆಯ ನಂತರ ನಿಖರ ತೀರ್ಪಿನಲ್ಲಿ ಗಣನೀಯ ಏರಿಕೆಯಾಗಿದೆ ಎಂದರು.