ಮೆಲ್ಬೋರ್ನ್: ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಎಷ್ಟೇ ಚನ್ನಾಗಿ ಆಡಿದರು ಭಾರತ 3-0 ಅಥವಾ 4-0 ಅಂತರದಿಂದ ಜಯಗಳಿಸಲಿದೆ ಎಂದು ಟೀಂ ಇಂಡಿಯಾದ ಹಿರಿಯ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾ ತಂಡವನ್ನು ಕ್ಲೀನ್ ಸ್ವಿಪ್ ಮಾಡಲಿದೆ ಎಂದು ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
2012-13ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾವನ್ನು ಮೊದಲ ಬಾರಿಗೆ ಟೀಂ ಇಂಡಿಯಾ 4-0 ಅಂತರದಿಂದ ಕ್ಲೀನ್ ಸ್ವಿಪ್ ಮಾಡಿತ್ತು. ನಂತರ 2014-15ರಲ್ಲಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತ್ತು. 2004ರಿಂದ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಗೆದ್ದಿಲ್ಲ ಎಂದು ಹೇಳಿದ್ದಾರೆ.
ಭಾರತ ನೆಲದಲ್ಲಿ ಆಸ್ಟ್ರೇಲಿಯಾ ಆಟಗಾರರು ತರಗೆಲೆಯಂತೆ ಉದುರಿಹೋಗುತ್ತಾರೆ. ಭಾರತೀಯ ಸ್ಪಿನ್ ದಾಳಿಗೆ ತತ್ತರಿಸುತ್ತಾರೆ. ಡೇವಿಡ್ ವಾರ್ನರ್ ಮತ್ತು ನಾಯಕ ಸ್ಟೀವ್ ಸ್ಮಿತ್ ಬಿಟ್ಟರೆ ಮತ್ಯಾವ ಆಟಗಾರರು ತಮ್ಮ ನೆಲದಲ್ಲಿ ಆಡುವಂತೆ ಭಾರತದಲ್ಲಿ ಆಡಲು ಯೋಗ್ಯರಲ್ಲ ಎಂದು ಹರ್ಭಜನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics