ಕರುಣ್ ನಾಯರ್ 
ಕ್ರಿಕೆಟ್

ತ್ರಿಶತಕ ವೀರ ಕನ್ನಡಿಗ ಕರುಣ್ ನಾಯರ್ ಕಾರ್ ನಂ.303!

ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿದ ಭಾರತದ ದ್ವಿತೀಯ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಹೊಸ ಕಾರನ್ನು ಖರೀದಿಸಿದ್ದು...

ಬೆಂಗಳೂರು: ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿದ ಭಾರತದ ದ್ವಿತೀಯ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಹೊಸ ಕಾರನ್ನು ಖರೀದಿಸಿದ್ದು, ಅದರ ನಂಬರ್ ಪ್ಲೆಟ್ ನಂಬರ್ ನಿಂದಾಗಿ ಸುದ್ಧಿಯಲ್ಲಿದ್ದಾರೆ. 
ಕರುಣ್ ನಾಯರ್ ಕೆಂಪು ಬಣ್ಣದ ನೂತನ ಫೋರ್ಡ್ ಮುಸ್ಟಾಂಗ್ ಕಾರೊಂದನ್ನು ಖರೀದಿಸಿದ್ದಾರೆ. ಅದರ ನಂಬರ್ ಪ್ಲೇಟ್ ಇದೀಗ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ತಮ್ಮ ಕಾರಿಗೆ ಕೆಎ 03 ಎನ್ಎ 303 ಎನ್ನುವ ನಂಬರ್ ಆಯ್ಕೆ ಮಾಡಿಕೊಂಡಿದ್ದು ಅವರು ಚೆನ್ನೈ ಟೆಸ್ಟ್ ನಲ್ಲಿ ಸಿಡಿಸಿದ ತ್ರಿಶತಕದ ಸಾಧನೆಯನ್ನು ಬಿಂಬಿಸಿದಂತಾಗಿದೆ. ಜತೆಗೆ ಕೆಎ ಎಂಬುದು ಕರ್ನಾಟಕ ಎನ್ನುವುದರೊಂದಿಗೆ ಇಂಗ್ಲೀಷ್ ಅಕ್ಷರದಲ್ಲಿ ಕರುಣ್ ಹೆಸರಿನ ಆರಂಭಿಕ 2 ಅಕ್ಷರಗಳಾಗಿವೆ. 
ಇನ್ನು ಎನ್ಎ ಎನ್ನುವುದು ನಾಯರ್ ಹೆಸರಿನ ಆರಂಭಿಕ 2 ಅಕ್ಷರಗಳು. ವೃತ್ತಿಜೀವನದ 3ನೇ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರಿಂದ 03 ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ