ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಕುಡಿದ ಮತ್ತಿನಲ್ಲಿ ರೈಲು ನಿಲ್ದಾಣದ ಪ್ಲಾಟ್ ಫಾರಂಗೆ ಕಾರು ನುಗ್ಗಿಸಿದ ಕ್ರಿಕೆಟಿಗ

ಕುಡಿದ ಮತ್ತಿನಲ್ಲಿ ಅಂಧೇರಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಗೆ ಕಾರು ನುಗ್ಗಿಸಿದ ಕ್ರಿಕೆಟರ್ ...

ಪ್ಲಾಟ್ ಫಾರಂಗೆ ನುಗ್ಗಿರುವ ಕಾರು
Shilpa D
Updated On : 20 Feb 2017, 2:15 am

ಮುಂಬಯಿ: ಕುಡಿದ ಮತ್ತಿನಲ್ಲಿ ಅಂಧೇರಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಗೆ ಕಾರು ನುಗ್ಗಿಸಿದ ಕ್ರಿಕೆಟರ್ ಹರ್‌ಪ್ರೀತ್‌ ಸಿಂಗ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಳಗ್ಗೆ ಬಾಂದ್ರಾದಿಂದ ಹೊರಟಿದ್ದ ಅವರು ಕಾರನ್ನು ಜನ ದಟ್ಟಣೆಯಿಂದ ಕೂಡಿರುವ ಅಂಧೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್‌ನತ್ತ ಒಯ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. . ವೇಗವಾಗಿ ಕಾರು ಬಂದಿದ್ದನ್ನು ನೋಡಿ ಜನ ಗಾಬರಿಗೊಂಡಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಗಲಾಟೆ ಕೂಡ ನಡೆದಿದೆ.

ದೈಹಿಕ ವೈಕಲ್ಯ ಹೊಂದಿರುವವರಿಗೆ ಗಾಲಿ ಕುರ್ಚಿ ಮೂಲಕ ಪ್ಲಾಟ್‌ಫಾರ್ಮ್‌ಗೆ ಸಂಪರ್ಕ ಕಲ್ಪಿಸುವ ಇಳಿಜಾರು ರಸ್ತೆಯ ಮೂಲಕ ಹರ್‌ಪ್ರೀತ್‌ ಸಿಂಗ್‌ ಕಾರು ಚಲಾಯಿಸಿದ್ದರು. ದಿಕ್ಕು ತಪ್ಪಿ ತಿಳಿಯದೆ ಸ್ಟೇಷನ್‌ ಪ್ರವೇಶಿಸಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ. ಹರ್ಪ್ರೀತ್ ಅಂಡರ್ 19 ಕ್ರಿಕೆಟ್ ಆಟಗಾರನಾಗಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments