ವಿರಾಟ್ ಕೊಹ್ಲಿ-ಉಮರ್ ಅಕ್ಮಲ್ 
ಕ್ರಿಕೆಟ್

ನನ್ನನ್ನು ಕೊಹ್ಲಿಗೆ ಹೋಲಿಕೆ ಮಾಡುವುದು ನ್ಯಾಯೋಚಿತವಲ್ಲ: ಉಮರ್ ಅಕ್ಮಲ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ನನ್ನನ್ನು ಹೋಲಿಕೆ ಮಾಡುವುದು ನ್ಯಾಯೋಚಿತವಲ್ಲ ಎಂದು ಪಾಕಿಸ್ತಾನದ ಆಟಗಾರ ಉಮರ್ ಅಕ್ಮಲ್...

ಕರಾಚಿ(ಪಾಕಿಸ್ತಾನ): ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ನನ್ನನ್ನು ಹೋಲಿಕೆ ಮಾಡುವುದು ನ್ಯಾಯೋಚಿತವಲ್ಲ ಎಂದು ಪಾಕಿಸ್ತಾನದ ಆಟಗಾರ ಉಮರ್ ಅಕ್ಮಲ್ ಹೇಳಿದ್ದಾರೆ. 
ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ ನಾನು ಪಾಕಿಸ್ತಾನ ಪರ ಆರನೇ ಕ್ರಮಾಂಕದಲ್ಲಿ ಆಡುತ್ತೇನೆ. ಹೀಗಾಗಿ ನಮ್ಮಿಬ್ಬರನ್ನು ಒಂದೇ ತಕ್ಕಡಿಗೆ ಹಾಕುವುದು ಸರಿಯಲ್ಲ. ಇಬ್ಬರು ಒಂದೇ ಕ್ರಮಾಂಕದಲ್ಲಿ ಆಡಿದರೆ ಆಗ ನಮ್ಮಿಬ್ಬರ ಹೋಲಿಕೆ ಮಾಡಿ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಲಾಹೋರ್ 
ಕ್ವಾಲಂಡರ್ಸ್ ಪರ ಆಡುತ್ತಿರುವ ಉಮರ್ ಅಕ್ಮಲ್(66 ರನ್ 42 ಎಸೆತ) ಉತ್ತಮ ಪ್ರದರ್ಶನ ನೀಡಿ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಇದಕ್ಕೆ ಅಭಿಮಾನಿಗಳು ಅಕ್ಮಲ್ ರನ್ನು ಕೊಹ್ಲಿಗೆ ಹೋಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಮಲ್ ನನ್ನುನ್ನು ಕೊಹ್ಲಿ ಜತೆ ಹೋಲಿಸಬೇಡಿ ಎಂದಿದ್ದಾರೆ. 
ಪಾಕಿಸ್ತಾನ ಪರ 116 ಏಕದಿನ ಪಂದ್ಯಗಳನ್ನಾಡಿರುವ ಉಮರ್ ಅಕ್ಮಲ್ 3,044 ರನ್ ಸಿಡಿಸಿದ್ದಾರೆ. ಕೊಹ್ಲಿ 179 ಏಕದಿನ ಪಂದ್ಯಗಳ ಪೈಕಿ 7,755 ರನ್ ಸಿಡಿಸಿದ್ದಾರೆ. ಇನ್ನು ಅಕ್ಮಲ್ 82 ಟಿ20 ಪಂದ್ಯಗಳ ಪೈಕಿ 1,690 ರನ್ ಸಿಡಿಸಿದ್ದು 48 ಪಂದ್ಯಗಳ ಪೈಕಿ ವಿರಾಟ್ 1,709 ರನ್ ಗಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!