ಎಂ.ಎಸ್.ಕೆ ಪ್ರಸಾದ್- ಎಂ.ಎಸ್.ಧೋನಿ
ನವದೆಹಲಿ: ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸುವಂತೆ ಮಹೇಂದ್ರಸಿಂಗ್ ಧೋನಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಒತ್ತಡ ಹೇರಲಿಲ್ಲ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ನಾಯಕ ಸ್ಥಾನ ತ್ಯಜಿಸುವ ಬಗ್ಗೆ ಮಹೇಂದ್ರ ಸಿಂಗ್ ಧೋನಿಯವರೇ ನಿರ್ಧಾರ ತೆಗೆದುಕೊಂಡಿದ್ದು, ಅವರ ಮೇಲೆ ಬಿಸಿಸಿಐ ಯಾವುದೇ ಹೇರಲಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ.
ತಂಡವನ್ನು ಮುನ್ನಡೆಸಲು ವಿರಾಟ್ ಕೊಹ್ಲಿಯೇ ಅರ್ಹ ವ್ಯಕ್ತಿ. ಹಾಗಾಗಿ ನಾಯಕ ಸ್ಥಾನ ತ್ಯಜಿಸುವಂತೆ ಬಿಸಿಸಿಐ ಧೋನಿಗೆ ಒತ್ತಡ ಹೇರಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್‍ನೆಕ್ಸ್ಟ್ ಜತೆ ಮಾತನಾಡಿದ ಪ್ರಸಾದ್, 9 ವರ್ಷಗಳ ಕಾಲ ನಾಯಕ ಸ್ಥಾನ ನಿರ್ವಹಿಸಿ, ಅದನ್ನು ತ್ಯಜಿಸುವ ನಿರ್ಧಾರ ಧೋನಿಯ ವೈಯಕ್ತಿಕ ನಿರ್ಧಾರವಾಗಿತ್ತು ಎಂದಿದ್ದಾರೆ. ಅಲ್ಲದೆ ನಾಗ್ಪುರದಲ್ಲಿ ಜಾರ್ಖಂಡ್ ಮತ್ತು ಗುಜರಾತ್ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ದೋನಿ ಈ ನಿರ್ಧಾರವನ್ನು ನನಗೆ ಹೇಳಿದ್ದರು ಎಂದು ಪ್ರಸಾದ್. ತಿಳಿಸಿದ್ದಾರೆ.