ವಿರೇಂದ್ರ ಸೆಹ್ವಾಗ್ 
ಕ್ರಿಕೆಟ್

ಟ್ವೀಟರ್‌ನಲ್ಲಿ ಅವರಿವರ ಕಾಲೆಳೆಯುತ್ತಿದ್ದ ಸೆಹ್ವಾಗ್‌ರ ಕಾಲೆಳೆದ ಎಮಿರೇಟ್ಸ್ ಏರ್‌‌ಲೈನ್ಸ್‌

ಎಲ್ಲರ ಕಾಳೆಯುತ್ತದೆ ಕಾಲ ಎಂಬ ಮಾತು ಇದೀಗ ನಿಜವಾಗಿದೆ. ಟ್ವೀಟರ್ ನಲ್ಲಿ ಅವರಿವರ ಕಾಲೆಳೆಯುತ್ತಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರ...

ನವದೆಹಲಿ: ಎಲ್ಲರ ಕಾಳೆಯುತ್ತದೆ ಕಾಲ ಎಂಬ ಮಾತು ಇದೀಗ ನಿಜವಾಗಿದೆ. ಟ್ವೀಟರ್ ನಲ್ಲಿ ಅವರಿವರ ಕಾಲೆಳೆಯುತ್ತಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ಕಾಲನ್ನು ಎಮಿರೇಟ್ಸ್ ಏರ್‌‌ಲೈನ್ಸ್‌ ಎಳೆದಿದೆ.

ಎಂಎಸ್ ಧೋನಿ ಇತ್ತೀಚೆಗಷ್ಟೇ ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು. ಇದನ್ನು ಎಮಿರೇಟ್ಸ್247.ಕಾಂ ಎಂಬ ವೆಬ್ ಸೈಟ್ ತನ್ನ ಟ್ವೀಟರ್ ನಲ್ಲಿ ಪ್ರಕಟಿಸಿತ್ತು. ಆದರೆ ಇದರಲ್ಲಿ ಧೋನಿ ಚಿತ್ರದ ಬದಲಿಗೆ ಧೋನಿ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಚಿತ್ರವನ್ನು ಬಳಸಿದ್ದರು. ಇದನ್ನು ಅಣಕವಾಡಲು ಹೋಗಿ ಸೆಹ್ವಾಗ್ ಹಳ್ಳಕ್ಕೆ ಬಿದ್ದಿದ್ದಾರೆ.

ಸೆಹ್ವಾಗ್ ಎಮಿರೇಟ್ಸ್247.ಕಾಂ ವೆಬ್ ಸೈಟ್ ಅನ್ನು ಎಮಿರೇಟ್ಸ್ ಏರ್‌‌ಲೈನ್ಸ್‌ ಎಂದು ತಪ್ಪಾಗಿ ಅರ್ಥೈಸಿಕೊಂಡು ಟ್ವೀಟರ್ ನಲ್ಲಿ ತಮ್ಮನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯ ಚಿತ್ರವನ್ನು ಹಾಕಿ ಅದರ ಕೆಳಗೆ ಎಮಿರೇಟ್ಸ್247 ಮುಂದಿನ ಬಾರಿ ನಿಮ್ಮ ವಿಮಾನದಲ್ಲಿ ಪ್ರಯಾಣಿಸಲು ಬಂದರೆ ನನ್ನ ಬದಲು ಅವನನ್ನು ಹತ್ತಿಸಿಕೊಳ್ಳವುದಿಲ್ಲವೆಂದು ಭಾವಿಸುತ್ತೇನೆ ಎಂದು ಬರೆದಿದ್ದರು.

ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಎಮಿರೇಟ್ಸ್ ಏರ್‌‌ಲೈನ್ಸ್‌ ಇದರಿಂದ ನಮಗೆ ಬೇಸರವಿಲ್ಲ, ಬನ್ನಿ, ನೀವು ನಮ್ಮ ವಿಮಾನ ಹತ್ತುವುದನ್ನು ಕಾಯುತ್ತಿದ್ದೇವೆ ಎಂದು ಎಮಿರೇಟ್ಸ್ ಟ್ವೀಟ್ ಮಾಡಿದ್ದು ಒಟ್ಟಾರೆ ಸೆಹ್ವಾಗ್ ತಪ್ಪುನ್ನು ಸರಿ ಮಾಡಲು ಹೋಗಿ ಸುಲಭ ತುತ್ತಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್