ಮಿಡ್ನಾಪುರ: ಪತ್ರದ ಮೂಲಕ ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಜೀವ ಬೆದರಿಕೆ ಹಾಕಿದವನನ್ನು ನಿರ್ಮಾಲ್ಯ ಸಮಂತಾ ಎಂದು ಗುರುತಿಸಲಾಗಿದ್ದು ಈತ ಗಂಗೂಲಿಯ ಕಟ್ಟಾಭಿಮಾನಿ ಎಂದು ತಿಳಿದುಬಂದಿದೆ.
ಸೌರವ್ ಗಂಗೂಲಿ ಜತೆ ಹಲವು ಫೋಟೋಗಳನ್ನು ತೆಗೆಸಿಕೊಂಡಿರುವ ನಿರ್ಮಾಲ್ಯ ಮನೆಯಲ್ಲಿ ಇಟ್ಟಿದ್ದ. ಈತ ಗಂಗೂಲಿಗೆ ಜೀವ ಬೆದರಿಕೆ ಹಾಕಿದಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿನ ಒಳ ಜಗಳಗಳೂ ಇದಕ್ಕೆ ಕಾರಣವಿರಬಹುದೆಂದು ಊಹಿಸಲಾಗಿದೆ.