ಕ್ರಿಕೆಟ್

ವಿರಾಟ್ ಕೊಹ್ಲಿ ಮಂತ್ರ: ಕೆಲವೇ ಸ್ನೇಹಿತರು, ಕಡಿಮೆ ಚಿತ್ತ ಚಾಂಚಲ್ಯ!

Vishwanath S

ನವದೆಹಲಿ: ಟೀಂ ಇಂಡಿಯಾದ ನೂತನ ನಾಯಕ ವಿರಾಟ್ ಕೊಹ್ಲಿ ಸದ್ಯ ಮೈದಾನದಲ್ಲಿ ಮಿಂಚು ಹರಿಸುತ್ತಿದ್ದಾರೆ. ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ನನಗೆ ಸ್ನೇಹಿತರ ಬಳಗ ಕಡಿಮೆ ಇದೆ ಹೀಗಾಗಿ ನಾನು ಚಾಂಚಲ್ಯತೆಗೆ ಒಳಗಾಗಲ್ಲ ಎಂದು ಹೇಳಿದ್ದಾರೆ.

ಬಿಬಿಸಿ ಪರವಾಗಿ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನನ್ನ ಅದೃಷ್ಟಕ್ಕೆ, ನನಗೆ ಆತ್ಮೀಯ ಸ್ನೇಹಿತರು ಹೆಚ್ಚಿಲ್ಲ. ಹೀಗಾಗಿ ನಾನು ಅವರಿಗೆ ಹೆಚ್ಚು ಸಮಯ ಕೊಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಹೆಚ್ಚು ಸ್ನೇಹಿತರಿದ್ದರೆ ಅವರೊಂದಿಗೆ ಮಾತನಾಡಬೇಕಾಗುತ್ತದೆ ಆಗ ನನ್ನ ಸಮಯ ನಿರ್ವಹಣೆ ಕಠಿಣವಾಗುತ್ತದೆ ಎಂದು ಹೇಳಿದ್ದಾರೆ.

ಅಂತೂ ಕೊನೆಗೂ ವಿರಾಟ್ ಕೊಹ್ಲಿ ತಮ್ಮ ತಾಂತ್ರಿಕ ಹೊಂದಾಣಿಕೆಯ ಬಗ್ಗೆ ಹೇಳಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಆಡಿದ್ದ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದು ಅರ್ಧ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. 2014ರ ಅಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಮಿಂಚು ಹರಿಸಿದ್ದರು. ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕು ಶತಕ ಸಿಡಿಸಿದ್ದ ಅವರು ಅಂದಿನಿಂದ ಇಂದಿನವರೆಗೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೂ ನನಗೆ ನಾನೇ ಹೆಚ್ಚು ಒತ್ತಡವನ್ನು ಹಾಕಿಕೊಂಡಿದ್ದೆ, ರನ್ ಸಿಡಿಸುವ ಒತ್ತಡದಲ್ಲಿದ್ದ ನಾನು ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದೆ ಎಂದು ಹೇಳಿದ್ದಾರೆ.

SCROLL FOR NEXT