ಕ್ರಿಕೆಟ್

ಯುವಿ, ಧೋನಿ ಅಬ್ಬರದ ಶತಕ; ಇಂಗ್ಲೆಂಡ್ ವಿರುದ್ಧ ಭಾರತ 381 ರನ್

Lingaraj Badiger
ಕಟಕ್‌: ಸುಮಾರು 6 ವರ್ಷಗಳ ನಂತರ ಭರ್ಜರಿ ಕಮ್‌ಬ್ಯಾಕ್‌ ಮಾಡಿರುವ ಯುವರಾಜ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿಯ ಅಬ್ಬರದ ಶಕತಕದ ನೆರವಿನೊಂದಿಗೆ ಭಾರತ ಇಂಗ್ಲೆಂಡ್ ಗೆ 382ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.
ಒಡಿಶಾದ ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್(150) ಹಾಗೂ ಮಹೇಂದ್ರ ಸಿಂಗ್ ಧೋನಿ(134) ಮೂರು ವರ್ಷಗಳ ನಂತರ ಮೊದಲ ಶತಕ ಸಿಡಿಸಿ ಸಂಭ್ರಮಿಸಿದರು.
ಟೀಂ ಇಂಡಿಯಾ ಟಾಸ್ ಗೆದ್ದು ಆರಂಭಿಕ ಆಘಾತ ಅನುಭವಿಸಿದರೂ ನಂತರ ಬಂದ ಯುವರಾಜ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಆಂಗ್ಲರ ಬೆವರಿಳಿಸಿದರು.
ಯುವರಾಜ್‌ ಸಿಂಗ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ 2011ರ ವಿಶ್ವಕಪ್‌ ಪಂದ್ಯಾವಳಿಯ ನಂತರ ಇಂದು ಮೊದಲ ಶತಕ ಸಿಡಿಸಿದ್ದಾರೆ.
20.3 ಓವರ್‌ಗಳಲ್ಲಿ ಭಾರತ 95 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿತ್ತು. ಕೆ.ಎಲ್‌ ರಾಹುಲ್‌ 05, ಶಿಖರ್‌ ಧವನ್‌ 11, ವಿರಾಟ್‌ ಕೊಹ್ಲಿ 08 ರನ್‌ ಗಳಿಸಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ನಂತರ ಬಂದ ಯುವರಾಜ್‌ ಸಿಂಗ್‌ ಹಾಗೂ ಧೋನಿಯ ಉತ್ತಮ ಜೋತೆಯಾಟದ ನೆರವಿನೊಂದಿಗೆ ಭಾರತ ಬೃಹತ್ ಮೊತ್ತ ಕಲೆ ಹಾಕಿದೆ.
ಇಂಗ್ಲೆಂಡ್‌ ಪರ ವೇಗಿ ಕ್ರಿಸ್‌ ವೋಕ್ಸ್‌ 5 ಓವರ್‌ಗಳಲ್ಲಿ 14 ರನ್‌ ನೀಡಿ 3 ವಿಕೆಟ್‌ ಪಡೆದಿದ್ದಾರೆ.
SCROLL FOR NEXT