ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಿಂತ ಮುಂಚೆ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ ಡಿಆರ್‌ಎಸ್‌ಗೆ ಅಪೀಲ್ ಮಾಡಿ ಸುದ್ದಿ ಮಾಡಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಗಿಂತ ಮೊದಲೇ ಡಿಆರ್‌ಎಸ್‌ಗೆ ಅಪೀಲ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ 25 ರನ್ ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಅವರು ಶತಕದೊಂದಿಗೆ ಭರ್ಜರಿ 381 ರನ್ ದಾಖಲಿಸಲು ಸಾಧ್ಯವಾಯಿತು.
ಇಂಗ್ಲೆಂಡ್ ವೇಗಿ ಕ್ರಿಸ್ ವೋಕಸ್ ರ ಎಸೆದ 41ನೇ ಓವರ್ ನಲ್ಲಿ ಯುವರಾಜ್ ಸಿಂಗ್ ಬ್ಯಾಟ್ ಮಾಡಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ನೆಲಕ್ಕೆ ಬಿದ್ದು ಕೀಪರ್ ಕೈಸೇರಿತ್ತು. ಈ ವೇಳೆ ಕೀಪರ್ ಜೋಸ್ ಬಟ್ಲರ್ ಔಟ್ ಗೆ ಅಪೀಲ್ ಮಾಡಿದ್ದು ಸ್ಟ್ರೈಟ್ ಅಂಪೈರ್ ಅನಿಲ್ ಚೌಧರಿ ಅವರು ಔಟ್ ಅಂತ ತೀರ್ಪು ನೀಡಿದ್ದರು. ಕೂಡನೇ ನಾನ್ ಸ್ಟ್ರೈಕ್ ನಲ್ಲಿದ್ದ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದರು. ಬಳಿಕ ಯುವರಾಜ್ ಸಿಂಗ್ ಅಪೀಲ್ ಮಾಡಿದರು. ತೀರ್ಪನ್ನು ಪರಮರ್ಶಿಸಿದ ಮೂರನೇ ಅಂಪೈರ್ ನಾಟೌಟ್ ಅಂತ ತೀರ್ಪು ನೀಡಿದ್ದರು.
ಈ ವೇಳೆ ಪೆವಿಲಿಯನ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಯುವರಾಜ್ ಗಿಂತ ಮುಂಚೆ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದ ಕುರಿತು ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರೊಂದಿಗೆ ಚರ್ಚಿಸಿದ ಘಟನೆಯೂ ನಡೆದಿದೆ.
ನಾಲ್ಕನೇ ವಿಕೆಟ್ ಈ ಜೋಡಿ 256 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿ ಟೀಂ ಇಂಡಿಯಾ ಭರ್ಜರಿ ಮೊತ್ತ ದಾಖಲಿಸಲು ಕಾರಣರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics