ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯೊಂದಿಗೆ 2017 ಅನ್ನು ಆರಂಭಿಸಿರುವ ಟೀಂ ಇಂಡಿಯಾದ ಮುಂದಿನ ದಿನಗಳ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಕದಿನ ಸರಣಿ ಬಳಿಕ ಇಂಗ್ಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಜನವರಿ 22ರಂದು ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಬಳಿಕ ಜನವರಿ 26, 29 ಮತ್ತು ಫೆಬ್ರವರಿ 1 ರಂದು ಟಿ20 ಪಂದ್ಯಗಳು ನಡೆಯಲಿವೆ.
ಟೀಂ ಇಂಡಿಯಾ ಪುರುಷರ ತಂಡದ ವೇಳಾಪಟ್ಟಿ:
* ಭಾರತ-ಬಾಂಗ್ಲಾದೇಶ 1 ಟೆಸ್ಟ್(ಫೆ.8-12)
* ಭಾರತ-ಆಸ್ಟ್ರೇಲಿಯಾ 4 ಟೆಸ್ಟ್ ಫೆ. 23 ರಿಂದ ಮಾರ್ಚ್ 29ರವರೆಗೆ)
* ಐಸಿಸಿ ಚಾಂಪಿಯನ್ಸ್ ಟ್ರೋಫಿ(ಜೂನ್ 1 ರಿಂದ 18ರವರೆಗೆ)
* ಭಾರತ-ವೆಸ್ಟ್ ಇಂಡೀಸ್ 5 ಏಕದಿನ, 1 ಟಿ20 (ಜುಲೈ).
* ಭಾರತ-ಶ್ರೀಲಂಕಾ 3 ಟೆಸ್ಟ್, 5 ಏಕದಿನ, 1 ಟಿ20 ಪಂದ್ಯ (ಆಗಸ್ಟ್).
* ಭಾರತ-ದಕ್ಷಿಣ ಆಫ್ರಿಕಾ 4 ಟೆಸ್ಟ್, 5 ಏಕದಿನ, 2 ಟಿ20 (ಡಿಸೆಂಬರ್)
ಟೀಂ ಇಂಡಿಯಾ ಮಹಿಳಾ ತಂಡದ ವೇಳಾಪಟ್ಟಿ:
* 2017ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯಗಳು(ಫೆ 7-21)
* ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್-2017 (ಜೂನ್ 26 ರಿಂದ ಜುಲೈ 23)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics