1987ರಲ್ಲಿ ವಿಶ್ವಕಪ್ ಗೆದ್ದ ಅಲನ್ ಬಾರ್ಡರ್ ಪಡೆ 
ಕ್ರಿಕೆಟ್

ಆಸಿಸ್ ಗೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಅಲನ್ ಬಾರ್ಡರ್ ಪಡೆಗೆ 30 ವರ್ಷಗಳ ಬಳಿಕ ಪದಕ ಪ್ರದಾನ!

1987ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ತಂಡಕ್ಕೆ ಭಾನುವಾರ ಪದಕ ಪ್ರದಾನ ಮಾಡಲಾಗುತ್ತಿದೆ...

ಸಿಡ್ನಿ: 1987ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ತಂಡಕ್ಕೆ ಭಾನುವಾರ ಪದಕ ಪ್ರದಾನ ಮಾಡಲಾಗುತ್ತಿದೆ...

ಹೌದು...1987ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ತಂಡ 7 ರನ್ ಗಳ ಅಂತರದಿಂದ ಮಣಿಸಿತ್ತು. ಅದರೆ ಅಂದಿನ  ಪ್ರಶಸ್ತಿ ಸಮಾರಂಭದ ವೇಳೆ ವಿಜೇತರಿಗೆ ವಿಶ್ವಕಪ್ ಟ್ರೋಫಿ ಮಾತ್ರ ನೀಡಲಾಗಿತ್ತು. ಹೀಗಾಗಿ ಅಂದು ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡದ ಎಲ್ಲ ಸದಸ್ಯರಿಗೆ ಇಂದು ಪದಕ ಪ್ರದಾನ ಮಾಡಲಾಗುತ್ತಿದೆ. ಅಂದಿನ ಆಸ್ಟ್ರೇಲಿಯಾ  ತಂಡದ ನಾಯಕ ಮತ್ತು ಕ್ರಿಕೆಟ್ ಲೆಜೆಂಡ್ ಅಲನ್ ಬಾರ್ಡರ್ ಮತ್ತು ಅವರ 14 ಮಂದಿಯ ತಂಡ, ತಂಡದ ಮ್ಯಾನೇಜರ್ ಅಲನ್ ಕ್ರಾಂಪ್ಟನ್, ಕೋಚ್ ಬಾಬ್ ಸಿಂಪ್ಸನ್, ಫಿಸಿಯೋ ಥೆರಪಿಸ್ಟ್ ಇರ್ರೋಲ್ ಅಲ್ಕಾಟ್ ಅವರಿಗೆ ಸಿಡ್ನಿಯ  ಎಸ್ ಸಿಜಿ ಮೈದಾನದಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು, ಪಂದ್ಯದ ವಿರಾಮದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ತಂಡಕ್ಕೆ  ಪದಕ ಪ್ರದಾನ ಮಾಡಲಾಗುತ್ತದೆ. ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಹಾಗೂ ಐಸಿಸಿ ನಿರ್ದೇಶಕ ಡೇವಿಡ್ ಪೀವರ್ ಅವರು ಪದಕ ಪ್ರದಾನ ಮಾಡಲಿದ್ದಾರೆ.

2016ರಲ್ಲಿ ಐಸಿಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಿತಿಯು ವಿಶ್ವಕಪ್ ಟೂರ್ನಿಯಲ್ಲಿ ಈ ವರೆಗೂ ಪದಕ ಸ್ವೀಕರಿಸದ ತಂಡಗಳಿಗೆ ಪದಕ ಪ್ರದಾನ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಸಮಿತಿ ಶಿಫಾರಸ್ಸಿನ ಅನ್ವಯ  ಇದೀಗ ಅಲನ್ ಬಾರ್ಡರ್ ಪಡೆಗೆ ಪದಕ ಪ್ರದಾನ ಮಾಡಲಾಗುತ್ತಿದೆ. 2003ರವರೆಗೂ ಪದಕ ಪ್ರದಾನ ಟೂರ್ನಿ ಆಯೋಜಿಸುವ ದೇಶಗಳ ಆಯ್ಕೆಗೆ ಬಿಟ್ಟ ವಿಚಾರವಾಗಿತ್ತು. ಇದರಲ್ಲಿ ಐಸಿಸಿ ಮಧ್ಯ ಪ್ರವೇಶಿಸುತ್ತಿರಲಿಲ್ಲ. 2003ರ ಬಳಿಕ  ಐಸಿಸಿ ಟೂರ್ನಿಯ ಪ್ರಶಸ್ತಿ ಸಮಾರಂಭದಲ್ಲೂ ತನ್ನನ್ನು ತೊಡಗಿಸಿಕೊಂಡು, ಟೂರ್ನಿಯ ಅಂತಿಮ ಘಟ್ಟಕ್ಕೆ ಬಂದ ತಂಡಗಳಿಗೆ ಪದಕ ಪ್ರದಾನ ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT