ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಪರೇಷನ್ಸ್ ಮತ್ತು ಸ್ಟ್ರ್ಯಾಟಜಿ ಮುಖ್ಯಸ್ಥ ಹಾಗೂ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೇಂದ್ರ ಸೆಹ್ವಾಗ್ ಅವರು ನಮ್ಮ ಯುವ ಪ್ರತಿಭಾವಂತ ತಂಡವನ್ನು ಮುನ್ನಡೆಸಲು ಹಾಗೂ ಮಾರ್ಗದರ್ಶನ ನೀಡಲು ಹೆಮ್ಮೆಯಾಗುತ್ತಿದೆ ಎಂದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಈ ಬಾರಿ ಉನ್ನತ ಸ್ಥಾನಕ್ಕೇರಿಸುವುದು ನನ್ನ ಗುರಿ ಎಂದು ಸೆಹ್ವಾಗ್ ಹೇಳಿದ್ದಾರೆ.