ಸಚಿನ್ ತೆಂಡೂಲ್ಕರ್, ಮುಂಗುಸಿ
ಕೋಲ್ಕತ್ತ: 1993ರ ಹೀರೋ ಕಪ್ ಗೆಲ್ಲಲ್ಲು ಪರೋಕ್ಷವಾಗಿ ಮುಂಗುಸಿ ಕಾರಣ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹೀರೋ ಕಪ್ ನ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿತ್ತು. ಪಂದ್ಯದ ಕೊನೇ ಓವರ್ ನಲ್ಲಿ ಆಫ್ರಿಕಾಗೆ ಗೆಲ್ಲಲು 6 ರನ್ ಗಳಿಸಬೇಕಿತ್ತು. ಈ ವೇಳೆ ಬೌಲಿಂಗ್ ಮಾಡಿದ ಸಚಿನ್ ಯಾವುದೇ ರನ್ ನೀಡದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ದಕ್ಷಿಣ ಆಫ್ರಿಕಾದ ಆ ಪಂದ್ಯ ನನ್ನ ಪಾಲಿಗೆ ಮೊದಲ ಹೊನಲು ಬೆಳಕಿನ ಪಂದ್ಯವಾಗಿತ್ತು. ಪಂದ್ಯದ 2ನೇ ಅವಧಿಯಾಟದಲ್ಲಿ ಪದೇ ಪದೇ ಮುಂಗುಸಿ ಮೈದಾನಕ್ಕೆ ಬರುತ್ತಿತ್ತು. ಇದರಿಂದ ನಮ್ಮ ಅದೃಷ್ಟ ಬದಲಾಯಿತು. ಮುಂಗುಸಿ ಬಂದಾಗಲೆಲ್ಲಾ ವಿಕೆಟ್ ಉರುಳುತ್ತಿತ್ತು. ಕೊನೇ ಓವರ್ ಎಸೆಯುವುದಕ್ಕು ಮೊದಲು ಮುಂಗುಸಿ ಬರಲೆಂದು ಕಾಯುತ್ತಿದ್ದೆ ಎಂದು ಹಳೇ ನೆನಪನ್ನು ಮೆಲುಕು ಹಾಕಿದರು.