ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

16 ವರ್ಷಗಳ ಬಳಿಕ ನಿಧಾನಗತಿಯ ಅರ್ಧಶತಕ ಸಿಡಿಸಿದ ಭಾರತೀಯ ಎಂಎಸ್ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ಬರೆಯುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ಧೋನಿ 16 ವರ್ಷಗಳ ಬಳಿಕ...

ಎಂಎಸ್ ಧೋನಿ
Vishwanath S
Updated On : 3 Jul 2017, 5:29 am
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ಬರೆಯುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ಧೋನಿ 16 ವರ್ಷಗಳ ಬಳಿಕ ನಿಧಾನಗತಿಯಲ್ಲಿ ಅರ್ಧಶತಕ ಸಿಡಿಸಿದ ಭಾರತೀಯ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ. 
ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ 50 ರನ್ ಸಿಡಿಸಲು 108 ಎಸೆತಗಳನ್ನು ತೆಗೆದುಕೊಂಡಿದ್ದರು. ಇದು ಧೋನಿ ಅವರ ಏಕದಿನ ಕ್ರಿಕೆಟ್ ಜೀವನದ ನಿಧಾನಗತಿಯ ಅರ್ಧ ಶತಕವಾಗಿದೆ. ಇನ್ನು 16 ವರ್ಷಗಳ ಬಳಿಕ ಭಾರತೀಯ ಆಟಗಾರನೊಬ್ಬ ಅರ್ಧ ಶತಕ ಸಿಡಿಸಲು ಅತೀ ಹೆಚ್ಚು ಎಸೆತಗಳನ್ನು ತೆಗೆದುಕೊಂಡಿರುವುದು ಇದೇ ಮೊದಲು. 
ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ವಿಂಡೀಸ್ ವಿರುದ್ಧ 11 ರನ್ ಗಳಿಂದ ಹೀನಾಯ ಸೋಲು ಕಂಡಿದೆ. ವೆಸ್ಟ್ ಇಂಡೀಸ್ ಆಟಗಾರರನ್ನು ಅಲ್ಪಮೊತ್ತಕ್ಕೆ(189 ರನ್) ಭಾರತ ಕಟ್ಟಿ ಹಾಕಿತ್ತು. ಆದರೆ 190 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 178 ರನ್ ಗಳಿಗೆ ಸರ್ವ ಪತನ ಕಂಡಿತ್ತು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement