ಟೀಂ ಇಂಡಿಯಾ-ದಕ್ಷಿಣ ಆಫ್ರಿಕಾ
ಲಿಚೆಸ್ಟರ್: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದ್ದ ಟೀಂ ಇಂಡಿಯಾ ತಂಡಕ್ಕೆ ಮೊದಲ ಆಘಾತ ಎದುರಾಗಿದೆ.
ಲಿಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 115 ರನ್ ಗಳಿಂದ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 46 ಓವರ್ 158 ಪೇರಿಸಿ ಸರ್ವಪತನ ಕಂಡಿತು.
ದಕ್ಷಿಣ ಆಫ್ರಿಕಾ ಪರ ಲಿಜಿಲ್ಲೆ ಲೀ 92, ಡ್ಯಾನ್ ವ್ಯಾನ್ ನಿಕೆರ್ಕ್ 57 ಸಿಡಿಸಿದ್ದಾರೆ. ಭಾರತ ಪರ ಶಿಖಾ ಪಾಂಡೆ 40ಕ್ಕೆ 3 ವಿಕೆಟ್ ಪಡೆದಿದ್ದಾರೆ.
ಭಾರತ ಪರ ದೀಪ್ತಿ ಶರ್ಮಾ 60 ಮತ್ತು ಜೂಲನ್ ಗೋಸ್ವಾಮಿ ಅಜೇಯ 43 ರನ್ ಸಿಡಿಸಿದರೆ, ಡ್ಯಾನ್ ವ್ಯಾನ್ ನಿಕೆರ್ಕ್ 22ಕ್ಕೆ 4 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics