ನಮ್ಮ ಕೆಲ ತಪ್ಪುಗಳೇ ವಿಂಡೀಸ್ ವಿರುದ್ಧ ಸೋಲಿಗೆ ಕಾರಣ: ವಿರಾಟ್ ಕೊಹ್ಲಿ
ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಸೋಲಿನ ಬಳಿಕ ಮಾತನಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡ ವಿಂಡೀಸ್ ವಿರುದ್ಧ...
ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಸೋಲಿನ ಬಳಿಕ ಮಾತನಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡ ವಿಂಡೀಸ್ ವಿರುದ್ಧ ಗೆಲ್ಲಲು ಅರ್ಹವಾಗಿರಲಿಲ್ಲ ಎಂದು ಹೇಳಿದ್ದಾರೆ.
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ನಾವು ಉತ್ತಮ ಮೊತ್ತ ಕಲೆಹಾಕಿದರು ನಮ್ಮ ಕೆಲ ತಪ್ಪುಗಳಿಂದ ಪಂದ್ಯವನ್ನು ಕೈಚೆಲ್ಲಬೇಕಾಯಿತು. ಅನಿವಾರ್ಯ ಕ್ಯಾಚ್ ಗಳನ್ನು ಬಿಟ್ಟಿದ್ದೆ ತಂಡಕ್ಕೆ ದುಬಾರಿಯಾಯಿತು. ಮತ್ತೆ ಬ್ಯಾಟ್ ಮತ್ತು ಬೌಲಿಂಗ್ ನಲ್ಲೂ ಹಿನ್ನಡೆ ಸಾಧಿಸಿದ್ದು ಪಂದ್ಯ ಹೀನಾಯ ಸೋಲಿಗೆ ಕಾರಣವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಕಿಂಗ್ಸ್ಟನ್ ನ ಸಬೀನಾ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿತ್ತು. ಆರಂಭಿಕರಾಗಿ ಶಿಖರ್ ಧವನ್ ಜತೆ ಪಂದ್ಯ ಆರಂಭಿಸಿದ ವಿರಾಟ್ ಕೊಹ್ಲಿ ಬೌಂಡರಿಗಳ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದರೊಂದಿಗೆ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
191 ರನ್ ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಇವಿನ್ ಲೆವಿಸ್ ಭರ್ಜರಿ ಶತಕ 62 ಎಸೆತಗಳಲ್ಲಿ ಅಜೇಯ 125 ರನ್ ಸಿಡಿಸಿ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.