ಲಂಡನ್: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವ ದಾಖಲೆ ಮಾಡಿದ್ದಾರೆ.
ಮಹಿಳಾ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಅಗ್ರಮಾನ್ಯ ಆಟಗಾರ್ತಿ ಎಂಬ ಖ್ಯಾತಿಗೆ ಮಿಥಾಲಿ ರಾಜ್ ಭಾಜನರಾಗಿದ್ದಾರೆ. ಮಿಥಾಲಿ ರಾಜ್ ಕೇವಲ 183 ಪಂದ್ಯದಲ್ಲಿ 5993 ರನ್ ಪೇರಿಸಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವದಾಖಲೆ ಇಂಗ್ಲೆಂಡಿನ ಆಟಗಾರ್ತಿ ಚಾರ್ಲೊಟೆ ಎಡ್ವಾರ್ಡ್ಸ್ ಹೆಸರಿನಲ್ಲಿತ್ತು. ಎಡ್ವರ್ಡ್ಸ್ 191 ಪಂದ್ಯಗಳಲ್ಲಿ 5992 ರನ್ ಸಿಡಿಸಿದ್ದರು. ಇದೀಗ ಎಡ್ವರ್ಡ್ಸ್ ದಾಖಲೆಯನ್ನು ಮಿಥಾಲಿ ಮುರಿದಿದ್ದಾರೆ.
ಇನ್ನು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 6000 ರನ್ ಗಡಿ ದಾಟಿದ ಮೊದಲ ಮಹಿಳಾ ಆಟಗಾರ್ತಿಯಾಗಿ ಮಿಥಾಲಿ ರಾಜ್ ಹೊರಹೊಮ್ಮಿದ್ದಾರೆ.
16 ವರ್ಷವಿದ್ದಾಗ ಮಿಥಾಲಿ ರಾಜ್ 1999ರಲ್ಲಿ ಕ್ರಿಕೆಟ್ ಅಂಗಳಕ್ಕೆ ಇಳಿದಿದ್ದಳು. ಶತಕದ ಮೂಲಕ ತನ್ನ ತಾಕತ್ತನ್ನು ಮಿಥಾಲಿ ತೋರಿಸಿದ್ದಳು. ಅಲ್ಲಿಂದ ಕ್ರಿಕೆಟ್ ಬದುಕನ್ನು ಆರಂಭಿಸಿದ್ದ ಮಿಥಾಲಿ ರಾಜ್ ಇಂದು ಟೀಂ ಇಂಡಿಯಾ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics