ಕ್ರಿಕೆಟ್

ಮಿಥಾಲಿ ರಾಜ್ ವಿಶ್ವದಾಖಲೆ: ಅಭಿನಂದಿಸುವ ಭರದಲ್ಲಿ ಕೊಹ್ಲಿ ಮಾಡಿಕೊಂಡ ಎಡವಟ್ಟು!

Vishwanath S
ನವದೆಹಲಿ: ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್ ನಲ್ಲಿ 6000 ರನ್ ಪೇರಿಸಿ ವಿಶ್ವದಾಖಲೆ ಮಾಡಿದ್ದು ಮಿಥಾಲಿ ರಾಜ್ ರನ್ನು ಅಭಿನಂದಿಸುವ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಡವಟ್ಟು ಮಾಡಿದ್ದಾರೆ. 
ವಿರಾಟ್ ಕೊಹ್ಲಿ ತಮ್ಮ ಫೇಸ್ ಬುಕ್ ನಲ್ಲಿ ಮಿಥಾಲಿ ರಾಜ್ ಗೆ ಅಭಿನಂದನೆ ಸಲ್ಲಿಸಿದ್ದು ಜತೆಗೆ ಫೋಟೋವೊಂದನ್ನು ಬಳಿಸಿದ್ದಾರೆ. ಕೊಹ್ಲಿ ಮಾಡಿರುವ ಎಡವಟ್ಟು ಇಲ್ಲಿ ಆಗಿದೆ. ಮಿಥಾಲಿ ರಾಜ್ ಬದಲಿಗೆ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಪೂನಮ್ ರಾವುತ್ ಅವರು ಫೋಟೋ ಹಾಕಿದ್ದಾರೆ. 
ವಿರಾಟ್ ಕೊಹ್ಲಿ ಮಾಡಿರುವ ಎಡವಟ್ಟು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅಭಿಮಾನಿಗಳು ಕೊಹ್ಲಿ ಕಾಲೆಳೆಯುತ್ತಿದ್ದಾರೆ. 
SCROLL FOR NEXT