ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಕಿವೀಸ್ ಕಿವಿ ಹಿಂಡಿದ ಭಾರತ; ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡಿಗರ ಸಾಧನೆ!

ಶನಿವಾರ ಲಂಡನ್ ಡರ್ಬಿಯಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದ್ದಿದ್ದು, ಈ ಗೆಲುವಿನಲ್ಲಿ ಕರ್ನಾಟಕದ ಇಬ್ಬರು ಆಟಗಾರ್ತಿಯರ ಪಾತ್ರ ನಿರ್ಣಾಯಕವಾಗಿತ್ತು.

ಡರ್ಬಿ: ಶನಿವಾರ ಲಂಡನ್ ಡರ್ಬಿಯಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದ್ದಿದ್ದು, ಈ ಗೆಲುವಿನಲ್ಲಿ ಕರ್ನಾಟಕದ ಇಬ್ಬರು ಆಟಗಾರ್ತಿಯರ  ಪಾತ್ರ ನಿರ್ಣಾಯಕವಾಗಿತ್ತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾದ ಸ್ಮೃತಿ ಮಂದಾನಾ ಹಾಗೂ ರೌತ್ 21 ರನ್ ಗಳಾಗುವಷ್ಟರಲ್ಲೇ ವಿಕೆಟ್  ಕಳೆದುಕೊಳ್ಳುವುದರೊಂದಿಗೆ ತಂಡ ಒತ್ತಡಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಗಿಳಿದ ನಾಯಕಿ ಮಿಥಾಲಿ ರಾಜ್ ಹಾಗೂ ಕೌರ್ ಉತ್ತಮ ಜೊತೆಯಾಟ ನೀಡಿದರು. ಇವರಿಬ್ಬರ ಉತ್ತಮ ಜೊತೆಯಾಟದ ನೆರವಿನಿಂದ ಭಾರತ 150  ರನ್ ಗಳ ದಾಟಿತು. ಆದರೆ ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಕೌರ್ 60 ರನ್ ಗಳಿಸಿ ನಿರ್ಗಮಿಸಿದರು. ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ನಾಯಕಿ ಮಿಥಾಲಿ ರಾಜ್ ಅವರಿಗೆ ಯಾರೂ ಸಾಥ್ ನೀಡಲಿಲ್ಲ. ಕೌರ್  ಬಳಿಕ ಬಂದ ಶರ್ಮಾ ಕೂಡ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಭಾರತ ಮತ್ತಷ್ಟು ಒತ್ತಡಕ್ಕೆ ಸಿಲುಕಿತ್ತು.

ಭಾರತ 37ನೇ ಓವರ್ ನಲ್ಲಿ ಬ್ಯಾಟಿಂಗ್ ಮಾಡುತ್ತಿತ್ತು. ಆದರೆ ಗಳಿಸಿದ್ದ ಮೊತ್ತ ಮಾತ್ರ ಕೇವಲ 154 ರನ್ ಗಳು. ಉಳಿದಿರುವ 13 ಓವರ್ ಗಳಲ್ಲಿ ಭಾರತ ಹೆಚ್ಚೆಚ್ಚು ರನ್ ಗಳಿಸು ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಬ್ಯಾಟಿಂಗ್ ಗೆ  ಇಳಿದ ಕನ್ನಡತಿ ವೇದಾ ಕೃಷ್ಣಮೂರ್ತಿ ಮೈದಾನದಲ್ಲಿ ಮಿಂಚು ಹರಿಸಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಅವರು 2 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ಸಹಿತ 70 ರನ್ ಸಿಡಿಸಿದರು. ಇದೇ ಹೊತ್ತಿನಲ್ಲಿ ನಾಯಕಿ  ಮಿಥಾಲಿ ಕೂಡ ಶತಕ ಸಿಡಿಸಿ ಸಂಭ್ರಮಿಸಿದರು. ಇವರಿಬ್ಬರ ಹೋರಾಟದ ಫಲವಾಗಿ ಭಾರತ ತಂಡ 50 ಓವರ್ ಗಳಲ್ಲಿ 265 ರನ್ ಗಳನ್ನು ಕಲೆಹಾಕಿತು.

ಇನ್ನು ಬೌಲಿಂಗ್ ನಲ್ಲಿ ಕಿವೀಸ್ ಪಡೆಯನ್ನು ಕಾಡಿದ್ದು ಮತ್ತೋರ್ವ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್..ಕಿವೀಸ್ ಪಡೆ ಬ್ಯಾಟಿಂಗ್ ಇಳಿಯುತ್ತಿದ್ದಂತೆಯೇ ಪಾಂಡೆ ಮತ್ತು ಗೋಸ್ವಾಮಿ ಆರಂಭಿಕರ ವಿಕೆಟ್ ಪಡೆದು ಒತ್ತಡಕ್ಕೆ  ಸಿಲುಕಿಸಿದರು. ಬಳಿಕ ಮೈದಾನದಲ್ಲಿ ನಡೆದಿದ್ದ ಅಕ್ಷರಶಃ ರಾಜೇಶ್ವರಿ ಅವರ ಬೌಲಿಂಗ್ ಮಿಂಚು...ಕೇವಲ 7.3 ಓವರ್ ಗಳನ್ನು ಎಸೆದ ರಾಜೇಶ್ವರ್ ಗಾಯಕ್ವಾಡ್ ಅವರು 15 ರನ್ ಗಳನ್ನು ನೀಡಿ ಕಿವೀಸ್ ಪಡೆಯ ಐದು ಪ್ರಮುಖ  ವಿಕೆಟ್ ಗಳನ್ನು ಕಬಳಿಸಿದರು. ಅವರಿಗೆ ಶರ್ಮಾ ಕೂಡ ಉತ್ತಮ ಸಾಥ್ ನೀಡಿ 2 ವಿಕೆಟ್ ಕಬಳಿಸಿದರು.

ಅಂತಿಮವಾಗಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿ ಕಿವೀಸ್ ವಿರುದ್ಧ ಭರ್ಜರಿ 186 ರನ್ ಗಳ ಜಯ ದಾಖಲಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ