ಕ್ರಿಕೆಟ್

ಶಾಸ್ತ್ರಿ ಸಲಹೆ ಮೇರೆಗೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ: ವರದಿ

Srinivasamurthy VN

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್ ರವಿಶಾಸ್ತ್ರಿ ಅವರ ಸಲಹೆ ಮೇರೆಗೆ ಮಾಜಿ ಕ್ರಿಕೆಟಿಗ ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಭರತ್ ಅರುಣ್ ಪರ ಬ್ಯಾಟಿಂಗ್ ಮಾಡಿದ್ದ ರವಿಶಾಸ್ತ್ರಿ ಅಂತೂ ತಮ್ಮ ಪಟ್ಟು ಸಡಿಲಿಸದೇ ಅವರನ್ನೇ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿಸುವಲ್ಲಿ ಸಫಲರಾಗಿದ್ದು, ಶಾಸ್ತ್ರಿ ಸಲಹೆ ಮೇರೆಗೆ ಭರತ್ ಅರುಣ್ ಅವರನ್ನೇ  ಬೌಲಿಂಗ್ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಹೊರಬಿದ್ದಲ್ಲವಾದರೂ, ಶೀಘ್ರದಲ್ಲೇ ಬಿಸಿಸಿಐ ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ  ಮಾಡಿದ ಕುರಿತು ಪ್ರಕಟಣೆ ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅಂದರೆ 2014ರಿಂದ 2016ರವರೆಗೂ ಭರತ್ ಅರುಣ್ ಅವರು ತಂಡದ ಕೋಚಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಅವರು ಮಾಡಿದ್ದ  ಕಾರ್ಯಗಳನ್ನೇ ರವಿಶಾಸ್ತ್ರಿ ಬಿಸಿಸಿಐ ಮುಂದೆ ಮಂಡಿಸಿದ್ದೇ, ಇದರ ಆಧಾರದ ಮೇಲೆಯೇ ಅವರನ್ನು ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಬೇಕು ಎಂದು ರವಿಶಾಸ್ತ್ರಿ ಪಟ್ಟ ಹಿಡಿದ್ದರು ಎಂದು ತಿಳಿದುಬಂದಿತ್ತು. ಓರ್ವ  ಕ್ರಿಕೆಟರ್ ಆಗಿ ಭರತ್ ಅರುಣ್ ಉತ್ತಮ ವೈಯುಕ್ತಿಕ ಸಾಧನೆಯ ಅಂಕಿಅಂಶಗಳನ್ನೇನೂ ಹೊಂದಿಲ್ಲವಾದರೂ ಕೋಚಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದಾಗಿನಿಂದ ತಮ್ಮ ಶ್ರಮದ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ.  ಅಂತೆಯೇ ಕೋಚ್ ರವಿಶಾಸ್ತ್ರಿ ಅವರಿಗೆ ಭರತ್ ಅರುಣ್ ಆಪ್ತರಾಗಿದ್ದು, ಇದೇ ಕಾರಣಕ್ಕೆ ಅವರನ್ನು ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡುವಂತೆ ರವಿಶಾಸ್ತ್ರಿ ಪಟ್ಟು ಹಿಡಿದಿದ್ದರು ಎಂದು ಹೇಳಲಾಗುತ್ತಿದೆ.

ಬಿಸಿಸಿಐನ ಉನ್ನತ ಮೂಲಗಳ ಪ್ರಕಾರ ಈಗಾಗಲೇ ಸಿಒಎ ಪ್ರಧಾನ ಕೋಚ್ ರವಿಶಾಸ್ತ್ರಿ ಅವರ ಸಲಹೆ ಮೇರೆಗೆ ಸಂಪೂರ್ಣ ಅವಧಿಗೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಅವರನ್ನು ನೇಮಕ ಮಾಡಿದ್ದು, ಈ ಬಗ್ಗೆ ಶೀಘ್ರದಲ್ಲೇ  ಪ್ರಕಟಣೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.

SCROLL FOR NEXT