ಸಂಗ್ರಹ ಚಿತ್ರ 
ಕ್ರಿಕೆಟ್

ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಈಗ ಆರ್ ಬಿಐ ಆಧಿಕಾರಿ!

ಒಂದು ಕಾಲದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಇದೀಗ ಆರ್ ಬಿಐ ಅಧಿಕಾರಿಯಾಗಿ ನೇಮಕವಾಗಿದ್ದಾರೆ...

ನವದೆಹಲಿ: ಒಂದು ಕಾಲದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಇದೀಗ ಆರ್ ಬಿಐ ಅಧಿಕಾರಿಯಾಗಿ ನೇಮಕವಾಗಿದ್ದಾರೆ...

ಹೌದು.. ಟೀಂ ಇಂಡಿಯಾದ ಖ್ಯಾತ ವೇಗಿ ಉಮೇಶ್ ಯಾದವ್ ಅವರ ತಂದೆಯ ಕನಸಿನಂತೆ ಸರ್ಕಾರಿ ನೌಕರಿ ಗಿಟ್ಟಿಸಿದ್ದು, ಇದೀಗ ಆರ್ ಬಿಐ ಆಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಉಮೇಶ್ ಯಾದವ್  ಅವರ ತಂದೆ ತಿಲಕ್ ಯಾದವ್, ತಮ್ಮ ಕಿರಿಯ ಮಗ ಉಮೇಶ್ ಯಾದವ್ ಸರ್ಕಾರಿ ಕೆಲಸದಲ್ಲಿರಬೇಕು ಎಂದು ಬಯಸಿದ್ದರಂತೆ. ಇದೇ ಕಾರಣಕ್ಕಾಗಿ ಉಮೇಶ್ ಕೂಡ ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೇಬಲ್ ಹುದ್ದೆಗೆ ನಡೆದ  ಪರೀಕ್ಷೆಯನ್ನೂ ಬರೆದಿದ್ದರು. ದುರದೃಷ್ಟವಶಾತ್, ಉಮೇಶ್ ಪರೀಕ್ಷೆ ಪಾಸ್ ಮಾಡಲು ಆಗಿರಲಿಲ್ಲ.

ಆದರೆ ಹತ್ತು ವರ್ಷಗಳ ಬಳಿಕ ಹಾಲಿ ವಿಶ್ವ ಕ್ರಿಕೆಟ್ ನ ಪ್ರಮುಖ ವೇಗದ ಬೌಲರ್​ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಉಮೇಶ್, ಪೊಲೀಸ್ ಪೇದೆಗಿಂತ ದೊಡ್ಡ ಮಟ್ಟದ ಸರ್ಕಾರಿ ನೌಕರಿಯನ್ನು ಸಂಪಾದಿಸಿದ್ದಾರೆ. ಮೂಲಗಳ ಪ್ರಕಾರ  ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ನಾಗ್ಪುರ ಕಚೇರಿಯಲ್ಲಿ 29 ವರ್ಷದ ಉಮೇಶ್ ಯಾದವ್​ ಗೆ ಸಹಾಯಕ ವ್ಯವಸ್ಥಾಪಕ ಹುದ್ದೆ ಲಭಿಸಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ತೆರಳಲಿರುವ ಭಾರತ ತಂಡವನ್ನು ಕೂಡಿಕೊಳ್ಳುವ  ಮುನ್ನ ಸೋಮವಾರ ಆರ್​ಬಿಐ ಕಚೇರಿಗೆ ತೆರಳಿ, ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

‘ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಾತುಕತೆ ನಡೆಸುತ್ತಿದ್ದೆವು. ಕಳೆದ ಮೇ ತಿಂಗಳಿನಲ್ಲಿ ಇಂಗ್ಲೆಂಡ್​ ಗೆ ಹೊರಡುವ ಮುನ್ನ ಆರ್​ ಬಿಐ ಅಧಿಕಾರಿಗಳೊಂದಿಗೆ ಉಮೇಶ್ ಮಾತನಾಡಿದ್ದರು. ಅಧಿಕಾರಿಗಳು ಕ್ರೀಡಾ ಕೋಟಾದಡಿಯಲ್ಲಿ  ಉಮೇಶ್​ ಗೆ ಹುದ್ದೆ ನೀಡಲು ಒಪ್ಪಿದ್ದಾರೆ. ಆದರೆ, ರಾಷ್ಟ್ರೀಯ ತಂಡದೊಂದಿಗೆ ಕ್ರಿಕೆಟ್ ಸರಣಿ ಇದ್ದ ಕಾರಣ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ’ ಎಂದು ಆರ್ ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2008ರಲ್ಲಿ ವಿದರ್ಭ ತಂಡದ ಪರವಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ತಂಡದ ನಾಯಕ ಪ್ರೀತಮ್ ಗಂಧೆ, ಉಮೇಶ್​ ರನ್ನು ಏರ್ ಇಂಡಿಯಾ ಕಚೇರಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದರು. ಆದರೆ, ಉತ್ತಮ ನಿರ್ವಹಣೆ  ನಡುವೆಯೂ ಏರ್ ಇಂಡಿಯಾ ಹುದ್ದೆಯನ್ನು ಪರ್ಮನೆಂಟ್ ಮಾಡಿರಲಿಲ್ಲ. ‘ರಾಜ್ಯ ತಂಡವನ್ನು ಪ್ರತಿನಿಧಿಸಿದ ಬೆನ್ನಲ್ಲಿಯೇ ಅವರು ಪರ್ಮನೆಂಟ್ ಸರ್ಕಾರಿ ಹುದ್ದೆ ಪಡೆದುಕೊಳ್ಳಬಹುದಿತ್ತು. ಆದರೆ, ಅದು ಕೂಡ ಸಾಧ್ಯವಾಗಿರಲಿಲ್ಲ.  ಹೀಗಾಗಿ ಇದಕ್ಕಿಂತಲೂ ಮಿಗಿಲಾದ ಗೌರವಾನ್ವಿತ ಸಂಸ್ಥೆಯನ್ನು ಪ್ರತಿನಿಧಿಸಬೇಕು ಎನ್ನುವ ಬಯಕೆ ಅವರಲ್ಲಿತ್ತು. ಹಾಗಾಗಿ ಕೆಲಸಕ್ಕೆ ಯಾವುದೇ ಆತುರ ತೋರಿರಲಿಲ್ಲ. ಈಗ ಅವರು ಆಸೆ ಪಟ್ಟಂತಹ ಕೆಲಸ ಸಿಕ್ಕಿದ್ದು, ಆರ್ ​ಬಿಐ  ನಿಂದ ಕೆಲಸ ಗಿಟ್ಟಿಸಿದ್ದಾರೆ ಎಂದು ಗಂಧೆ ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!