ಮಹಿಳಾ ವಿಶ್ವಕಪ್: ಆಸ್ಪ್ರೇಲಿಯಾ ಮಣಿಸಿದ ಭಾರತ, ಫೈನಲ್'ಗೆ ಲಗ್ಗೆ 
ಕ್ರಿಕೆಟ್

ಮಹಿಳಾ ವಿಶ್ವಕಪ್: ಆಸ್ಪ್ರೇಲಿಯಾ ಮಣಿಸಿದ ಭಾರತ, ಫೈನಲ್'ಗೆ ಲಗ್ಗೆ

ಮಧ್ಯಮ ಕ್ರಮಾಂಕದ ಆಕ್ರಮಣಕಾರಿ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಅವರ ಅತ್ಯಮೋಘ ಶತಕ ಹಾಗೂ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್...

ಡೆರ್ಬಿ: ಮಧ್ಯಮ ಕ್ರಮಾಂಕದ ಆಕ್ರಮಣಕಾರಿ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಅವರ ಅತ್ಯಮೋಘ ಶತಕ ಹಾಗೂ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳ ಗೆಲವು ಸಾಧಿಸಿದ ಭಾರತ, 2ನೇ ಬಾರಿಗೆ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ. 
ಈ ಮೂಲಕ 2005ರ ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಭಾರತದ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದ ಸಾಧನೆ ಮಾಡಿದೆ. ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್ ನಲ್ಲಿ ಭಾರತ ಆತಿತೇಯ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. 

ಇಂಗ್ಲೆಂಡ್'ನ ಡೆರ್ಬಿ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ಪಂದ್ಯ 3 ಗಂಟೆಗಳ ಕಾಲ ತಡವಾಗಿ ಆರಂಭಗೊಂಡಿತ್ತು. ಮಳೆ ಹಿನ್ನಲೆಯಲ್ಲಿ ಪಂದ್ಯವನ್ನು ತಲಾ 43 ಓರವರ್ ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ಆರಂಭ ಪಡೆದುಕೊಂಡರೂ, ಹರ್ಮನ್ ಪ್ರೀತ್ ಕೌರ್ ಅವರ ಅಬ್ಬರದ ಬ್ಯಾಟಿಂಗ್ ನಿಂದ 281 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. 

ಇದರಂತೆ ಭಾರತ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಭಾರತೀಯ ವೇಗಿಗಳು ಆರಂಭಿಕ ಆಘಾತ ನೀಡಿದರು. ಶಿಖಾ ಪಾಂಡೆ ಬೌಲಿಂಗ್ ನಲ್ಲಿ ಮೂನಿ ಬೌಲ್ಡ್ ಆದರೆ, ನಾಯಕಿ ಲ್ಯಾನಿಂಗ್ ಖಾತೆ ತೆರೆಯುವ ಮುನ್ನವೇ ಜೂಲನ್ ಗೆ ವಿಕೆಟ್ ಅರ್ಪಿಸಿದರು. ದೀಪ್ತಿ ಬೋಲ್ಟನ್ ಗೆ ಪೆವಿಲಿಯನ್ ದಾರಿ ತೋರಿಸಿದರು. 21 ರನ್ ಗಳಿಸುವುಷ್ಟರಲ್ಲಿ ಆಸ್ಟ್ರೇಲಿಯಾ ತಂಡ 3 ವಿಕೆಟ್ ಗಳನ್ನು ಕಳೆದುಕೊಂಡಿತು. 

ನಂತರ 4ನೇ ವಿಕೆಟ್ ಗೆ ಕ್ರೀಸ್ ಹಂಚಿಕೊಂಡ ವಿಲ್ಲಾನಿ ಹಾಗೂ ಪೆರ್ರಿ ಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. 58 ಎಸೆತಗಳಲ್ಲಿ 75 ರನ್ ಗಳಿಸಿದ್ದ ವಿಲ್ಲಾನಿಯನ್ನು ಕರ್ನಾಟಕದ ರಾಜೇಶ್ವರಿ ಔಟ್ ಮಾಡಿದರು. ಪೆರ್ರಿ, ಪಾಂಡೆಗೆ 2ನೇ ಬಲಿಯಾದರು. ಕೇವಲ 14 ರನ್ ಗಳ ಅಂತರದಲ್ಲಿ ಆಸ್ಪ್ರೇಟಿಯಾ ತನ್ನ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. 

ಇವರಿಬ್ಬರ ನಿರ್ಗಮನದ ಬಳಿಕ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ, ಕೊನೆಯಲ್ಲಿ ಅಲೆಕ್ಸ್ ಬ್ಲ್ಯಾಕ್ ವೆಲ್ ಹೋರಾಟ ನಡೆಸಿ ಪಂದ್ಯವನ್ನು ಅಂತಿಮ ಘಟ್ಟದ ವರೆಗೂ ತಂದರು. 51 ಎಸೆತಗಳಲ್ಲಿ 90 ರನ್ ಗಳಿಸಿದರು. 41ನೇ ಓವರ್ ನ ಮೊದಸ ಎಸೆತದಲ್ಲಿ ದೀಪ್ತಿ ಶರ್ಮಾ, ಬ್ಲ್ಯಾಕ್ ವೆಲ್ ರನ್ನು ಬೌಲ್ಡ್ ಮಾಡುತ್ತಿದ್ದಂತೆಯೇ ಭಾರತೀಯರ ಸಂಭ್ರಮ ಮುಗಿಸು ಮುಟ್ಟಿತ್ತು. 

ಅಬ್ಬರಿಸಿದ ಕೌರ್, ಕಾಂಗರೂ ತತ್ತರ
ಮಳೆಯಿಂದಾಗಿ ಪಂದ್ಯದ ಆರಂಭ ವಿಳಂಭವಾಗಿತ್ತು. ಆರಂಭದಲ್ಲೇ ಸ್ಮೃತಿ ಮಂಧನಾ (6) ವಿಕೆಟ್ ಕಳೆದುಕೊಂಡ ಭಾರತಕ್ಕೆ ಹಿನ್ನಡೆಗೊಳಗಾಗಿತ್ತು. ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಸ್ಮತಿ ಸತತವಾಗಿ 6ನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು. 

ಆರಂಭಿಕ ಆಘಾತದಿಂದ ಒತ್ತಡಕ್ಕೆ ಸಿಲುಕಿದ ಭಾರತ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿತು. ನಾಯಕಿ ಮಿಥಾಲಿ ಹಾಗೂ ಹರ್ಮನ್ ಪ್ರೀತ್ ಕೌರ್ ತಂಡಕ್ಕೆ ಚೇತರಿಕೆ ನೀಡಿದರು. 25ನೇ ಓವರ್ ವೇಳೆಗೆ ಭಾರತ 100 ರನ್ ಗಡಿ ತಲುಪಿತು. ಮಿಥಾಲಿ 36 ರನ್ ಗಳಿಸಿ ನಿರ್ಗಮಿಸುತ್ತಿದ್ದಂತೆ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿತ್ತು. 

ನಾಯಕಿ ಔಟಾದ ಬಳಿಕ ಯುವ ಆಟಗಾರ್ತಿ ದೀಪ್ತಿ ಶರ್ಮಾ ಅವರ ಜತೆ ಕ್ರೀಸ್ ಹಂಚಿಕೊಂಡ ಹರ್ಮನ್ ಪ್ರೀತ್ ಭಾರತದ ರನ್ ಗಳಿಕೆಗೆ ವೇಗ ತುಂಬಲು ಆರಂಭಿಸಿದರು. 21ನೇ ಓರವ್ ಕೊನೆ ಎಸೆತದಲ್ಲಿ ಅರ್ಧ ಶಕತ ಪೂರೈಸಿದ ಹರ್ಮನ್ ಪ್ರೀತ್, 30 ಓವರ್ ಗಳ ನಂತರ ಪ್ರಚಂಡ ಬ್ಯಾಟಿಂಗ್ ನಡೆಸಿದರು. 

ಆರ್ಧ ಶತಕ ಗಳಿಸಲು 61 ಎಸೆತ ತೆಗೆದುಕೊಂಡಿದ್ದ ಅವರು, ತಾವು ಎದುರಿಸಿದ 90ನೇ ಎಸೆತದಲ್ಲಿ ಶತಕ ಪೂರೈಸಿದರು. ಏಕದಿನ ಕ್ರಿಕೆಟ್ ನಲ್ಲಿ ಇದು ಅವರ 3ನೇ ಶತಕವಾಗಿದೆ. ದೀಪ್ತಿ ಹಾಗೂ ಕೌರ್ 137 ರನ್ ಗಳ ಜೊತೆಯಾಟವಾಡಿದರು. ಹರ್ಮನ್ ಪ್ರೀತ್ 115 ಎಸೆತಗಳಲ್ಲಿ 20 ಬೌಂಡರಿ, 7 ಸಿಕ್ಸರ್ ನೆರವಿನಿಂದ 171 ರನ್ ಗಳಿಸಿ ಅಜೇಯರಾಗಿ ಉಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!