ಸಂಗ್ರಹ ಚಿತ್ರ 
ಕ್ರಿಕೆಟ್

ಹರ್ಮನ್ ಪ್ರೀತ್ ಕೌರ್ ಫೈನಲ್ ಪಂದ್ಯ ಆಡುವಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ: ಮಿಥಾಲಿ ರಾಜ್

ಅಭ್ಯಾಸದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಹರ್ಮನ್ ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲಿ ಆಡುವಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ಲಂಡನ್: ಅಭ್ಯಾಸದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಹರ್ಮನ್ ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲಿ ಆಡುವಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಸ್ಫೋಟಕ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಅಭ್ಯಾಸದ ವೇಳೆ ಗಾಯಗೊಂಡು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರು. ಆದರೆ ಇದೀಗ ಅಭಿಮಾನಿಗಳ ಆತಂಕ ದೂರವಾಗಿದ್ದು, ಗಾಯಗೊಂಡಿದ್ದ ಹರ್ಮನ್ ಪ್ರೀತ್ ಕೌರ್ ಫಿಟ್ ಆಗಿದ್ದಾರೆ ಎಂದು ನಾಯಕಿ ಮಿಥಾಲಿ ರಾಜ್ ಸ್ಪಷ್ಟಪಡಿಸಿದ್ದಾರೆ.

ಪಂದ್ಯಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕಿ ಮಿಥಾಲಿ ರಾಜ್ ಅವರು, ಹರ್ಮನ್ ಪ್ರೀತ್ ಕೌರ್ ಫೈನಲ್ ಪಂದ್ಯವನ್ನಾಡುವಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ನಿಜಕ್ಕೂ ಆಕೆ ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ನೋವಿನಿಂದ ಬಳಲಿದ್ದರು. ಆದರೆ ಭಾನುವಾರದ ಪಂದ್ಯಕ್ಕೆ ಆಕೆ ಖಂಡಿತಾ ಫಿಟ್ ಆಗಿರುತ್ತಾರೆ ಎಂಬ ವಿಶ್ವಾಸ ನನ್ನಲಿದೆ ಎಂದು ಮಿಥಾಲಿ ಹೇಳಿದ್ದಾರೆ.

ಪಂಜಾಬ್ ಮೂಲದ ಕ್ರಿಕೆಟ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕೇವಲ 115 ಎಸೆತಗಳಲ್ಲಿ 171 ರನ್ ಸಿಡಿಸಿದ್ದರು. ಅವರ ಈ ಅಮೋಘ ಬ್ಯಾಟಿಂಗ್ ಪರಾಕ್ರಮದಿಂದ ಭಾರತ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯಗಳಿಸಿತ್ತು. ಇದಾದ ಮಾರನೇಯ ದಿನವೇ ಹರ್ಮನ್ ಪ್ರೀತ್ ಕೌರ್ ಅಭ್ಯಾಸದ ವೇಳೆ ಭುಜದ ನೋವಿಗೆ ತುತ್ತಾಗಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಫೈನಲ್ ಪಂದ್ಯಕ್ಕೆ ಹರ್ಮನ್ ಪ್ರೀತ್ ಕೌರ್ ಅಲಭ್ಯ.ರಾಗಲಿದ್ದಾರೆ ಎಂದು ಸುದ್ದಿಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ; ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

Indian Stock Market: ಕಚ್ಚಾ ತೈಲ ದರ ಏರಿಕೆ; ರೂಪಾಯಿ ಮೌಲ್ಯ, Sensex ಇಳಿಕೆ

SCROLL FOR NEXT