ಮುಂಬೈ: ಜಗತ್ತಿನ ಅತಿ ದೊಡ್ಡ ಮಾಹಿತಿ ಮೂಲ ವಿಕಿಪೀಡಿಯಾದಲ್ಲಿ ಎರಡು ದಿನ ಮುನ್ನವೇ ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಭಾರತ ವಿನ್ನರ್, ಇಂಗ್ಲೆಂಡ್ ರನ್ನರ್ ಎಂದು ಪ್ರಕಟವಾಗಿತ್ತು.
ವಿಕಿಪೀಡಿಯಾದಲ್ಲಿನ ಮಾಹಿತಿಗಳನ್ನು ಲಕ್ಷಾಂತರ ಮಂದಿ ಓದುತ್ತಾರೆ. ಹೀಗಿದ್ದರು ಎರಡು ದಿನಕ್ಕೂ ಮುನ್ನವೇ ಭಾರತ ವಿಶ್ವಕಪ್ ಚಾಂಪಿಯನ್ ಎಂದು ಪ್ರಕಟಿಸಿ ದೊಡ್ಡ ತಪ್ಪನ್ನೇ ಮಾಡಿತ್ತು. ಈ ಬಗ್ಗೆ ಕೆಲ ವರದಿಗಳಾದ ನಂತರವೂ ವಿಕಿಪೀಡಿಯಾ ಮಾಹಿತಿಯನ್ನು ತಿದ್ದಲು ಹೋಗಿರಲಿಲ್ಲ.
ಮಾಹಿಳಾ ವಿಶ್ವಕಪ್ ಕ್ರಿಕೆಟ್ ಕುರಿತ ಸಮಗ್ರ ಮಾಹಿತಿಯಿರುವ ವುಮೆನ್ ಕ್ರಿಕೆಟ್ ವರ್ಲ್ಡ್ ಕಪ್ ಎಂಬ ವಿಕಿಪೀಡಿಯಾ ಪುಟದಲ್ಲಿ ಇಂತಹದೊಂದು ದೊಡ್ಡ ತಪ್ಪಾಗಿತ್ತು. ಯಾರೂ ಬೇಕಾದರೂ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ತಿದ್ದಬಹುದು, ಪ್ರಕಟಿಸಬಹುದು ಎಂಬ ಸುಲಭ ಅವಕಾಶವಿರುವುದರಿಂದ ಈ ತಪ್ಪು ಸಂಭವಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos