ಕ್ರಿಕೆಟ್

ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಗೆ ಫ್ಲಾಟ್, 1 ಕೋಟಿ ನಗದು ಬಹುಮಾನ ಘೋಷಿಸಿದ ತೆಲಂಗಾಣ

Srinivasamurthy VN

ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕಿ ಮಿಥಾಲಿ ರಾಜ್‌ಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಿಥಾಲಿ  ರಾಜ್ ಗೆ ತೆಲಂಗಾಣ ಸರ್ಕಾರ ಒಂದು ನಿವೇಶನ ಹಾಗೂ 1 ಕೋಟಿ. ರು.ನಗದು ಬಹುಮಾನ ಘೋಷಣೆ ಮಾಡಿದೆ.

ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಮುಕ್ತಾಯವಾದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಬಳಿಕ ತವರಿಗೆ ಆಗಮಿಸಿದ ಆಟಗಾರ್ತಿಯರನ್ನು ಆಯಾ ರಾಜ್ಯ ಸರ್ಕಾರಗಳು ಸನ್ಮಾನಿಸುತ್ತಿದ್ದು, ಇತ್ತೀಚೆಗೆ ತೆಲಂಗಾಣ ಸರ್ಕಾರ ಕೂಡ ಮಿಥಾಲಿ  ರಾಜ್ ರನ್ನು ಆದರದಿಂದ ಬರ ಮಾಡಿಕೊಂಡು ಗೌರವಿಸಿತು. ಈ ವೇಳೆ ಸ್ವತಃ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು, ಮಿಥಾಲಿ ರಾಜ್ ರನ್ನು ಸನ್ಮಾನಿಸಿ, ಮಿಥಾಲಿ ಸಾಧನೆಯನ್ನು ಶ್ಲಾಘಿಸಿದರು.

ಇದೇ ವೇಳೆ ತೆಲಂಗಾಣ ಸರ್ಕಾರ ಮಿಥಾಲಿ ರಾಜ್ ಅವರಿಗೆ ನಿವೇಶನವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಅಲ್ಲದೆ ಒಂದು ಕೋಟಿ ನಗದು ಬಹುಮಾನ ನೀಡುವುದಾಗಿ ಹೇಳಿದೆ. ಅಂತೆಯೇ ಮಿಥಾಲಿ  ರಾಜ್ ಕೋಚ್ ಆರ್ ಎಸ್ ಆರ್ ಮೂರ್ತಿ ಅವರನ್ನೂ ಕೂಡ ರಾಜ್ಯ ಸರ್ಕಾರ ಸನ್ಮಾನಿಸಿದ್ದು, ಅವರಿಗೆ 25 ಲಕ್ಷ ರು.ನಗದು ಬಹುಮಾನ ಘೋಷಣೆ ಮಾಡಲಾಗಿದೆ.

ಸನ್ಮಾನ ಸಮಾರಂಭದಲ್ಲಿ ಮಿಥಾಲಿ ರಾಜ್ ಅವರ ಪೋಷಕರು ಸೇರಿದಂತೆ ಅವರ ಆಪ್ತ ಸ್ನೇಹಿತರು, ಸರ್ಕಾರದ ಇತರೆ ಅಧಿಕಾರಿಗಳು ಹಾಜರಿದ್ದರು.

SCROLL FOR NEXT