ಕೊಲಂಬೋ: ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೋಹ್ಲಿ ನಾಯಕತ್ವವನ್ನು ಕೋಚ್ ರವಿಶಾಸ್ತ್ರಿ ಹೊಗಳಿದ್ದು, ಹಿಂದಿನ ಕ್ರಿಕೆಟ್ ಖ್ಯಾತನಾಮರ ತಂಡಗಳಿಗಿಂತ ಕೋಹ್ಲಿ ತಂಡ ಹೆಚ್ಚಿನ ಸಾಧನೆ ಮಾಡಿದೆ ಎಂದು ಬಣ್ಣಿಸಿದ್ದಾರೆ.
ಈ ಹಿಂದಿನ ಕ್ರಿಕೆಟ್ ಖ್ಯಾತ ನಾಮರ ನೇತೃತ್ವದಲ್ಲಿ ಸಾಧಿಸಲಾಗದೇ ಇರುವಂಥಹದ್ದನ್ನು ಕೋಹ್ಲಿ ನೇತೃತ್ವದ ಸಾಧಿಸಿದೆ. ಉದಾಹರಣೆಗೆ 2015 ರ ಶ್ರೀಲಂಕಾ ವಿರುದ್ಧದ ಸರಣಿಯನ್ನು ಕೋಹ್ಲಿ ನೇತೃತ್ವದ ತಂಡ 22 ವರ್ಷಗಳ ನಂತರ ಗೆದ್ದಿತ್ತು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಕಳೆದ 20 ವರ್ಷಗಳಲ್ಲಿ ಹಲವು ಖ್ಯಾತ ನಾಮರು ಶ್ರೀಲಂಕಾಗೆ ಬಂದು ಲಂಕಾ ವಿರುದ್ಧ ಸರಣಿಗಳನ್ನು ಆಡಿದ್ದಾರೆ, ಯಾರಿಂದಲೂ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಕೋಹ್ಲಿ ನೇತೃತ್ವದ ತಂಡಕ್ಕೆ ಮಾತ್ರ ಸರಣಿ ಗೆಲ್ಲುವುದು ಸಾಧ್ಯವಾಯಿತು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ವಿರಾಟ್ ಕೋಹ್ಲಿ ಇನ್ನೂ ಯುವಕರಾಗಿದ್ದಾರೆ, ತಂಡದ ನಾಯಕತ್ವ ವಹಿಸಿದ್ದ ಮೊದಲ ಪಂದ್ಯಕ್ಕೂ ಈಗಿನ ನಾಯಕತ್ವಕ್ಕೂ ಹೋಲಿಕೆ ಮಾಡಿದರೆ ಸುಧಾರಣೆ ಕಂಡಿದ್ದಾರೆ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.