ಮಿಥಾಲಿ ರಾಜ್ ಗೆ ಕೀ ಹಸ್ತಾಂತರಿಸುತ್ತಿರುವ ವಿ ಚಾಮುಂಡೇಶ್ವರನಾಥ್
ಹೈದರಾಬಾದ್: ಇತ್ತೀಚಿಗೆ ಮುಕ್ತಾಯಗೊಂಡ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡದ ಯಶಸ್ಸಿನ ರೂವಾರಿಯಾಗಿದ್ದ ನಾಯಕಿ ಮಿಥಾಲಿ ರಾಜ್ ಅವರಿಗೆ ಉದ್ಯಮಿ ವಿ ಚಾಮುಂಡೇಶ್ವರನಾಥ್ ಅವರು ಮಂಗಳವಾರ ಬಿಎಂಡಬ್ಲ್ಯೂ ಕಾರು ಕಾಣಿಕೆಯಾಗಿ ನೀಡಿದ್ದಾರೆ.
ಇಂಗ್ಲೆಂಡ್ ನಲ್ಲಿ ಮುಕ್ತಾಯವಾದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಬಳಿಕ ತವರಿಗೆ ಆಗಮಿಸಿರುವ ನಾಯಕಿ ಮಿಥಾಲಿ ರಾಜ್ ಅವರಿಗೆ ಚಾಮುಂಡೇಶ್ವರನಾಥ್ ಅವರು ಐಷಾರಾಮಿ ಕಾರು ಉಡುಗೋರೆಯಾಗಿ ನೀಡಿದ್ದಾರೆ.
ಉದ್ಯಮಿಯಿಂದ ಕಾರ್ ಕೀ ಸ್ವೀಕರಿಸಿದ ಬಳಿಕ ಮಾತನಾಡಿದ ಮಿಥಾಲಿ ರಾಜ್ ಅವರು, ಚಾಮುಂಡೇಶ್ವರನಾಥ್ ಅವರು ನನಗೆ ಕಾರು ಗಿಫ್ಟ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2005ರಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿ ಆಸ್ಟ್ರೇಲಿಯಾ ವಿರುದ್ಧ ಸೋತಾಗಲೂ ಚೆವ್ರೊಲೆಟ್ ಕಾರು ಗಿಫ್ಟ್ ನೀಡಿದ್ದರು ಎಂದಿದ್ದಾರೆ.
ಕಳೆದ ವರ್ಷ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೂ ಚಾಮುಂಡೇಶ್ವರನಾಥ್ ಬಿಎಂಡಬ್ಲು ಕಾರನ್ನು ಗಿಫ್ಟ್ ನೀಡಿದ್ದರು.