ಕ್ರಿಕೆಟ್

ಚಾಂಪಿಯನ್ಸ್‌ ಟ್ರೋಫಿ 2017: ಪಾಕ್ ಗೆಲುವಿಗೆ 324ರನ್ ಗಳ ಗುರಿ ನೀಡಿದ ಭಾರತ

Lingaraj Badiger
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಗೆಲುವಿಗೆ ಭಾರತ 324ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.
ಇಂದು ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿದೆ. ಆದರೆ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಾಕಿಸ್ತಾನ ಗೆಲ್ಲಲು 48 ಓವರ್​ಗಳಲ್ಲಿ 324 ರನ್​ ಪರಿಷ್ಕೃತ ಗುರಿ ನೀಡಲಾಗಿದೆ.
ಮೊದಲ ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಿತಾದರು ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿಪಡಿಸಿತು. ಹೀಗಾಗಿ ಪಂದ್ಯವನ್ನು 48 ಒವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.
ಆರಂಭಿಕ ಆಟಗಾರ ರೋಹಿತ್ ಶರ್ಮಾ 91, ಶಿಖರ್ ಧವನ್ 68, ವಿರಾಟ್ ಕೊಹ್ಲಿ ಔಟಾಗದೆ 81, ಯುವರಾಜ್ ಸಿಂಗ್ 53 ಹಾಗೂ ಹಾರ್ದಿಕ್ ಪಾಂಡೆ ಔಟಾಗದೆ 20 ರನ್ ಗಳಿಸಿದ್ದಾರೆ.
ಪಾಕಿಸ್ತಾನ ಪರ ಹಸನ್‌ ಆಲಿ, ಶಹಾಬ್‌ ಖಾನ್‌ ತಲಾ ಒಂದು ವಿಕೆಟ್ ಪಡೆದರು.
SCROLL FOR NEXT