ಬೆಂಗಳೂರು: ಹೃದಯಾಘಾತದಿಂದ ಮಾಜಿ ಬಿಸಿಸಿಐ ಪ್ಯಾನಲ್ ಅಂಪೈರ್ ರವಿ ಸುಬ್ರಹ್ಮಣ್ಯ ಅವರು ನಿಧನರಾಗಿದ್ದಾರೆ.
51 ವರ್ಷದ ರವಿ ಸುಬ್ರಹ್ಮಣ್ಯ ಅವರು ಬೆಂಗಳೂರಿನ ಆರ್ ಆರ್ ನಗರದಲ್ಲಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ರವಿ ಸುಬ್ರಹ್ಮಣ್ಯ ಅವರು 100ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಐಪಿಎಲ್ ನಲ್ಲೂ 4ನೇ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಭಾರತೀಯ ಕ್ರಿಕೆಟ್ ಗೆ ರವಿ ಅವರು ಸಲ್ಲಿಸಿದ ಸೇವೆಗಳಿಗೆ ಬಿಸಿಸಿಐ ಆಳವಾಗಿ ಋಣಿಯಾಗಿದೆ ಎಂದು ಕುಟುಂಬ ವರ್ಗಕ್ಕೆ ಸಂತಾಪ ವ್ಯಕ್ತಪಡಿಸಿದೆ.