ಕಾರ್ಡಿಫ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟ ಮೊದಲ ತಂಡವಾಗಿದೆ.
ಸೋಫಿಯಾ ಗಾರ್ಡನ್ಸ್ ನಲ್ಲಿ ನಡೆದ ಎ ಗುಂಪಿನ 2ನೇ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು 87 ರನ್ ಗಳಿಂದ ಮಣಿಸಿ ಉಪಾಂತ್ಯ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ನಿರ್ವಹಣೆಯಿಂದ 49.3 ಓವರ್ ಗಳಲ್ಲಿ 310 ರನ್ ಪೇರಿಸಿ ಆಲೌಟ್ ಆಯಿತು. 311 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 44.3 ಓವರ್ ಗಳಲ್ಲಿ 223 ರನ್ ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ಪರ ಜೋ ರೂಟ್ 64, ಜೋಸ್ ಬಟ್ಲರ್ 61 ಅಲೆಕ್ಸ್ ಹ್ಯಾಲ್ಸ್ 56 ಬೆನ್ ಸ್ಟೋಕ್ಸ್ 48 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಪರ ಮಿಲ್ಮೆ, ಕೋರಿ ಅಂಡರ್ ಸನ್ ತಲಾ 3 ವಿಕೆಟ್, ಟೀಮ್ ಸೌಥಿ 2 ವಿಕೆಟ್ ಪಡೆದಿದ್ದಾರೆ.
ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 87, ರಾಸ್ ಟೇಲರ್ 39, ನೀಶಾಮ್ 18, ಗುಪ್ಟಿಲ್ 27 ರನ್ ಗಳಿಸಿದರೆ, ಇಂಗ್ಲೆಂಡ್ ಪರ ಲಿಯಾಮ್ ಪ್ಲಂಕೆಟ್ 4, ಜೇಕ್ ಬಾಲ್, ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics