ಕ್ರಿಕೆಟ್

ಮೊದಲ ಬಾರಿಗೆ 'ಗೋಲ್ಡನ್ ಡಕ್' ಆದ ಎಬಿಡಿ ವಿಲಿಯರ್ಸ್

Vishwanath S
ಲಂಡನ್: ದಕ್ಷಿಣ ಆಫ್ರಿಕಾದ ನಾಯಕ ಎಬಿಡಿ ವಿಲಿಯರ್ಸ್ ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ ಗೋಲ್ಡನ್ ಡಕ್ ಆಗಿದ್ದಾರೆ. 
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್ ಮೊದಲ ಎಸೆತದಲ್ಲಿ ಔಟ್ ಆಗುವ ಮೂಲಕ ಗೋಲ್ಡನ್ ಡಕ್ ಆಗಿದ್ದಾರೆ. ಪಾಕಿಸ್ತಾನ ಸ್ಪಿನ್ ಬೌಲರ್ ಇಮದ್ ವಸೀಂ ಎಸೆತದಲ್ಲಿ ಮೊಹಮ್ಮದ್ ಹಫೀಜ್ ಗೆ ಕ್ಯಾಚ್ ನೀಡಿ ಔಟಾದರು. 
ಎಬಿಡಿ ವಿಲಿಯರ್ಸ್ 216 ಏಕದಿನ ಪಂದ್ಯಗಳನ್ನು ಆಡಿದ್ದು 9175 ರನ್ ಸಿಡಿಸಿದ್ದಾರೆ. ಶೇಕಡ 54.60 ಬ್ಯಾಟಿಂಗ್ ಸರಾಸರಿ ಹೊಂದಿರುವ ಅವರು ಇಲ್ಲಿಯವರೆಗೂ ಗೋಲ್ಡನ್ ಡಕ್ ಆಗಿರಲಿಲ್ಲ ಎಂಬುದು ವಿಶೇಷವಾಗಿತ್ತು. 
SCROLL FOR NEXT