ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಆಯ್ಕೆಗೆ ಸಲಹಾ ಸಮಿತಿ ಸಂಭಾವನೆ ಕೇಳಿಲ್ಲ: ಬಿಸಿಸಿಐ

Srinivasamurthy VN

ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆ ಸಂಬಂಧ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರು ಸಂಭಾವನೆ ಕೇಳಿದ್ದಾರೆ ಎಂಬ ಆರೋಪವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಾರಸಗಟಾಗಿ ತಳ್ಳಿ ಹಾಕಿದೆ.

ಬಿಸಿಸಿಐನ ಉನ್ನತ ಸಲಹಾ ಸಮಿತಿ ಸದಸ್ಯರಾಗಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಕೋಚ್ ಆಯ್ಕೆಗಾಗಿ ಬಿಸಿಸಿಐನಿಂದ ಸಂಭಾವನೆ ಕೇಳಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು  ಬಿಸಿಸಿಐ ತಳ್ಳಿ ಹಾಕಿದೆ. ಸಲಹಾ ಸಮಿತಿ ಸದಸ್ಯರು ಯಾವುದೇ ರೀತಿಯ ಸಂಭಾವನೆ ಕೇಳಿಲ್ಲ. ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ನಿರಾಧಾರವಾಗಿದೆ ಎಂದು ಬಿಸಿಸಿಐ ಹೇಳಿದೆ. ಅಂತೆಯೇ ಸಲಹಾ ಸಮಿತಿ  ಸಂಭಾವನೇ ಕೇಳಿದ ಸುದ್ದಿಯನ್ನು ದುರುದ್ದೇಶ ಪೂರಿತ ಎಂದು ಹೇಳಿರುವ ಬಿಸಿಸಿಐ, ಸಲಹಾ ಸಮಿತಿ ಸದಸ್ಯರು ಕೇವಲ ಕ್ರಿಕೆಟ್ ಅಭಿವೃದ್ಧಿ ನಿಟ್ಟಿನಲ್ಲಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರು, ಸಲಹಾ ಸಮಿತಿ ಸದಸ್ಯರಿಗೆ ಬಿಸಿಸಿಐ ಯಾವುದೇ ರೀತಿಯ ಸಂಭಾವನೆ ನೀಡುತ್ತಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿ ಆಧಾರ  ರಹಿತ ಹಾಗೂ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

SCROLL FOR NEXT