ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದು ಇಂಗ್ಲೆಂಡ್ ಪಾಕಿಸ್ತಾನಕ್ಕೆ 212 ರನ್ ಗಳ ಅಲ್ಪ ಮೊತ್ತದ ಗುರಿಯನ್ನು ನೀಡಿದೆ.
ಲಂಡನ್ ನ ಕಾರ್ಡಿಫ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 49.5 ಓವರ್ ನಲ್ಲಿ 211 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಪಾಕಿಸ್ತಾನಕ್ಕೆ 212 ರನ್ ಗಳ ಗುರಿ ನೀಡಿದೆ.
ಇಂಗ್ಲೆಂಡ್ ಪರ ಬೈರ್ಸ್ಟೋವ್ 43, ಹಾಲೆಸ್ 13, ಜೋ ರೂಟ್ 46, ಇಯಾನ್ ಮಾರ್ಗನ್ 33, ಬೇನ್ ಸ್ಟೋಕ್ಸ್ 34 ರನ್ ಗಳಿಸಿದ್ದಾರೆ.
ಪಾಕಿಸ್ತಾನ ಪರ ಹಸನ್ ಅಲಿ 3, ಜುನೈದ್ ಖಾನ್, ರಾಯಿಸ್ ತಲಾ 2 ವಿಕೆಟ್ ಪಡೆದಿದ್ದಾರೆ.
ಪ್ರಸ್ತುತ ಪಾಕಿಸ್ತಾನ 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿ ಆಡುತ್ತಿದೆ. ಪಾಕ್ ಪರ ಫಕ್ರಾ ಜಮಾನ್ 11 ಮತ್ತು ಅಝರ್ ಅಲಿ 5 ರನ್ ಗಳಿಸಿದ್ದಾರೆ.