ಚಾಂಪಿಯನ್ಸ್ ಟ್ರೋಫಿ ಸೆಮೀಸ್: ಟೀಂ ಇಂಡಿಯಾಗೆ 265 ರನ್ ಗುರಿ
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 264 ರನ್ ಸಿಡಿಸಿದ್ದು ಟೀಂ ಇಂಡಿಯಾಗೆ...
ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 264 ರನ್ ಸಿಡಿಸಿದ್ದು ಟೀಂ ಇಂಡಿಯಾಗೆ 265 ರನ್ ಗಳ ಗುರಿ ನೀಡಿದೆ.
ಎಡ್ಜ್ ಬ್ಯಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿದೆ.
ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್ 70, ಸೌಮ್ಯ ಸರ್ಕಾರ್ 0, ಶಬೀರ್ ರೆಹಮಾನ್ 19, ಮುಷ್ಪಿಕರ್ ರಹೀಮ್ 61, ಶಕೀಬ್ ಅಲ್ ಹಸನ್, ಮಹಮದ್ದುಲ್ಲಾ, ಮೊಸಡೇಕ್ ಹುಸೈನ್ 15, ಮೊಹಮ್ಮದುಲ್ಲಾ 21, ಮೊಸಡೇಕ್ ಹುಸೈನ್ 15 ರನ್ ಗಳಿಸಿ ಔಟಾಗಿದ್ದು, ಮಶ್ರಾಫೆ ಮೋರ್ಟಾಝಾ ಅಜೇಯ 30 ಮತ್ತು ಟಸ್ಕಿನ್ 11 ರನ್ ಸಿಡಿಸಿದ್ದಾರೆ.
ಭಾರತ ಪರ ಭುವನೇಶ್ವರ್ ಕುಮಾರ್, ಕೇದಾರ್ ಜಾದವ್, ಬುಮ್ರಾ ತಲಾ 2 ವಿಕೆಟ್ ಪಡೆದಿದ್ದಾರೆ.