ಸರ್ಫರಾಜ್ ಅಹಮ್ಮದ್-ವೀರೇಂದ್ರ ಸೆಹ್ವಾಗ್
ಪಾಕಿಸ್ತಾನ ತಂಡವನ್ನು ಸರ್ಫರಾಜ್ ಅಹಮ್ಮದ್ ಮುನ್ನಡೆಸುತ್ತಿದ್ದು ಶ್ರೀಲಂಕಾ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿದ ಸಂದರ್ಭದಲ್ಲಿ ನಡೆದ ಸುದ್ಧಿಗೋಷ್ಠಿ ವೇಳೆ ಇಂಗ್ಲೀಷ್ ನಲ್ಲಿ ಮಾತನಾಡಲು ತಡಬಡಾಸಿದ್ದರು. ಇದನ್ನು ಮುಂದಿಟ್ಟುಕೊಂಡು ಕೆಲವರು ಅವರನ್ನು ಟೀಕಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟೀಕಾಕಾರರಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ. ಸರ್ಫರಾಜ್ ಅಹಮ್ಮದ್ ಅವರು ಇಂಗ್ಲೀಷ್ ನಲ್ಲಿ ಮಾತನಾಡದಿರುವುದಕ್ಕೆ ಟೀಕಿಸುವುದು ಹುಚ್ಚುತನ. ಅವರು ಬಂದಿರುವುದು ಕ್ರಿಕೆಟ್ ಆಡಲು ಅದನ್ನು ಚನ್ನಾಗಿ ನಿಭಾಯಿಸಿದ್ದಾರೆ. ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಇದಕ್ಕಿಂತ ಇನ್ನು ಏನು ಬೇಕು ಎಂದು ಪ್ರಶ್ನಿಸಿದ್ದಾರೆ.
ಸರ್ಫರಾಜ್ ಗೆ ಹಿಂದಿ ಮತ್ತು ಉರ್ದು ಭಾಷೆ ಮಾತ್ರ ಸರಿಯಾಗಿ ಮಾಡನಾಡಲು ಬರುತ್ತದೆ. ಇನ್ನು ಸುದ್ದಿಗೋಷ್ಠಿಯಲ್ಲಿ ಎಲ್ಲರೂ ಆಂಗ್ಲರೇ ಇದ್ದದ್ದನ್ನು ಕಂಡ ಸರ್ಫರಾಜ್ ಗಾಬರಿಗೊಂಡಿದ್ದರು. ಇನ್ನು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಶರ್ಪರಾಜ್ ತಮಗೆ ಗೊತ್ತಿದ್ದ ಭಾಷೆಯಲ್ಲೇ ಉತ್ತರಿಸಿದ್ದರು.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯ ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದ್ದು ಸಾಂಪ್ರದಾಯಿಕ ಎದುರಾಳಿ ತಂಡಗಳು ಸೆಣೆಸುತ್ತಿರುವುದರಿಂದ ಪಂದ್ಯದ ಮೇಲೆ ಕೂತುಹಲ ಹೆಚ್ಚಾಗಿದೆ.