ಫಖರ್ ಝಮಾನ್ 
ಕ್ರಿಕೆಟ್

ಚಾಂಪಿಯನ್ಸ್ ಟ್ರೋಫಿ ಫೈನಲ್: ಚೊಚ್ಚಲ ಶತಕ ಸಿಡಿಸಿದ ಪಾಕ್ ಆಟಗಾರ ಫಖರ್ ಝಮಾನ್

ಬ್ರಿಟನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ಉತ್ತಮ ರನ್ ಗಳಿಕೆಯತ್ತ ಸಾಗುತ್ತಿದೆ.

ಲಂಡನ್: ಬ್ರಿಟನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ಉತ್ತಮ ರನ್ ಗಳಿಕೆಯತ್ತ ಸಾಗುತ್ತಿದೆ. ಭಾರತದ ಬೌಲರ್ ಗಳ ಎಸೆತಗಳನ್ನು ಮನಸೋ ಇಚ್ಛೆ ದಂಡಿಸಿದ ಪಾಕಿಸ್ತಾನದ ಬ್ಯಾಟ್ಸ್ ಮನ್ ಫಖರ್ ಝಮಾನ್ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮೊದಲ ಶತಕವನ್ನು ದಾಖಲಿಸಿದ್ದಾರೆ. 
114 ರನ್ ಗಳನ್ನು ಗಳಿಸಿದ್ದ ಫಖರ್ ಝಮಾನ್ ವೇಗಿ ಹಾರ್ದಿಕ್ ಪಾಂಡ್ಯ ಓವರ್ ನಲ್ಲಿ ಬೌಂಡರಿ ಹೊಡೆಯಲು ಹೋಗಿ ಜಡೇಜಾಗೆ ಕ್ಯಾಚ್ ಇತ್ತು ಔಟ್ ಆದರು. ಆದರೂ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೆಚ್ಚು ರನ್ ಗಳಿಸಲು ಫಖರ್ ಝಮಾನ್ 106 ಎಸೆತಗಳಲ್ಲಿ 114 ರನ್ ಗಳಿಸಿದ್ದು ನೆರವಾಯಿತು.
ಇತ್ತೀಚಿನ ವರದಿ ಪ್ರಕಾರ 42 ಓವರ್ ಗಳಿಗೆ 267 ರನ್ ಗಳನ್ನು ಗಳಿಸಿರುವ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡಿದೆ. ಕ್ಷಣ ಕ್ಷಣದ ಅಪ್ ಡೇಟ್ ಗಾಗಿ ಕನ್ನಡಪ್ರಭ.ಕಾಂ ಲೈವ್ ಸ್ಕೋರ್ ನ್ನು ಕ್ಲಿಕ್ಕಿಸಿ   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ