ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ವಿಷಯದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ತೋರಿದ ವರ್ತನೆಯನ್ನು ಮಾಜಿ ಕ್ರಿಕೆಟಿಗ ಎರಾಪಲ್ಲಿ ಪ್ರಸನ್ನ ಅವರು ಖಂಡಿಸಿದ್ದಾರೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ನಾನೇ ಬಾಸ್ ಅಂದುಕೊಂಡು ಬೀಗುತ್ತಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಕೋಚ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್ ಬೇಕಿಲ್ಲ. ಕೊಹ್ಲಿಗೆ ಯಾರೂ ಇಲ್ಲದೆ ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಇದೆ. ಮತ್ತೆ ಕೋಚ್ ಯಾಕೆ ಬೇಕು? ಎಂದು ವ್ಯಂಗ್ಯವಾಡಿದ್ದಾರೆ.
ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಉತ್ತಮ ನಾಯಕ ಎಂದು ನನಗನ್ನಿಸುತ್ತಿಲ್ಲ. ಅನಿಲ್ ಕುಂಬ್ಳೆ ಅಂತಹ ಖ್ಯಾತ ಕ್ರಿಕೆಟಿಗನಿಗೆ ಮರ್ಯಾರೆ ಸಿಕ್ಕಿಲ್ಲ ಎಂದ ಮೇಲೆ ಸಂಜಯ್ ಬಂಗಾರ್, ಶ್ರೀಧರ್ ಮಾತನ್ನು ಕೊಹ್ಲಿ ಕೇಳುತ್ತಾರೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪ್ರಸನ್ನ ಅವರು ಹೇಳಿದ್ದಾರೆ.