ನವದೆಹಲಿ: ಕ್ರಿಕೆಟ್ ಗೆ ಸಂಬಂಧಿಸಿದಂತೆ ನ್ಯಾ.ಆರ್.ಎಂ ಲೋಧ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರಲು ಬಿಸಿಸಿಐ 7 ಸದಸ್ಯರ ಸಮಿತಿ ರಚನೆ ಮಾಡಿದ್ದು, ಮಾಜಿ ಕ್ರಿಕೆಟಿಗ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಗಂಗೂಲಿಗೆ ಸ್ಥಾನ ನೀಡಲಾಗಿದೆ.
ಜೂ.26 ರಂದು ನಡೆದ ಬಿಸಿಸಿಐ ನ ವಿಶೇಷ ಸಭೆಯಲ್ಲಿ ಆರ್ ಎಂ ಲೋಧ ನೇತೃತ್ವದ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರಲು ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆಯೇ ಶಿಫಾರಸ್ಸುಗಳನ್ನು ಜಾರಿಗೆ ತರುವಾಗ ಕಠಿಣ ಅಂಶಗಳನ್ನು ಗುರುತಿಸಿ ಅವುಗಳನ್ನು ನಿರ್ವಹಿಸಲು ಸಮಿತಿ ರಚಿಸಲಾಗಿದ್ದು, ರಾಜೀವ್ ಶುಕ್ಲಾ, ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ, ಹಂಗಾಮಿ ಖಜಾಂಚಿ ಅನಿರುದ್ಧ್ ಚೌಧರಿ, ಟಿಸಿ ಮ್ಯಾಥ್ಯೂ, ನಭಾ ಭಟ್ಟಾಚಾರ್ಜಿ ಹಾಗೂ ಜೈ ಶಾ ಇದ್ದು ಮಾಜಿ ನಾಯಕ ಸೌರವ್ ಗಂಗೂಲಿಗೂ ಸ್ಥಾನ ನೀಡಲಾಗಿದೆ.