ಬೆಂಗಳೂರು ಟೆಸ್ಟ್ 2 ನೇ ದಿನದ ಪಂದ್ಯ
ಬೆಂಗಳೂರು: ಭಾರತ- ಆಸ್ಟ್ರೇಲಿಯಾ ನಡುವಿನ 2 ನೇ ಟೆಸ್ಟ್ ಪಂದ್ಯದ 2 ನೇ ದಿನದ ಆಟದಲ್ಲಿ ಆಸ್ಟ್ರೇಲಿಯಾ ತಂಡ 2 ವಿಕೆಟ್ ನಷ್ಟಕ್ಕೆ 83 ರನ್ ಗಳನ್ನು ಗಳಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 189 ರನ್ ಗಳಿಗೆ ಸರ್ವಪತನ ಕಂಡಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿತ್ತು. ಆದರೆ ಎರಡನೇ ದಿನದ ಆಟದಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡಿರುವ ಆಸ್ಟ್ರೇಲಿಯಾ 42 ಓವರ್ ಗಳಿಗೆ 83 ರನ್ ಗಳನ್ನು ಕಲೆ ಹಾಕಿದೆ.
ಎರಡನೇ ದಿನದ ಆಟವನ್ನು ಆರಂಭಿಸಿ 53 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆಯುವ ಮೂಲಕ ಆರ್ ಅಶ್ವಿನ್ ಅಘಾತ ನೀಡಿದರು. ನಂತರ ಆಸ್ಟ್ರೇಲಿಯಾ ತಂಡ ಇನ್ನು 30 ರನ್ ಕಲೆ ಹಾಕುತ್ತಿದ್ದಂತೆಯೇ ಸ್ಟೀವ್ ಸ್ಮಿತ್ ಆರ್ ಜಡೇಜಾ ಓವರ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಪ್ರಸ್ತುತ ಮ್ಯಾಟ್ ರೆನ್ಶಾ (40), ಶಾನ್ ಮಾರ್ಷ್ (2) ಕ್ರೀಸ್ ನಲ್ಲಿದ್ದು ಆಸ್ಟ್ರೇಲಿಯಾ 45 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿದೆ.
ಲೈವ್ ಅಪ್ ಡೇಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics