ಪಾರ್ಥಿವ್ ಹುಟ್ಟುಹಬ್ಬಕ್ಕೆ ಛೋಟಾ ಶಕ್ತಿಮಾನ್ ಫೋಟೋ ಹಾಕಿ ಕಾಲೆಳೆದ ಸೆಹ್ವಾಗ್
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸದಾ ಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿರುತ್ತಾರೆ...
ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸದಾ ಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿರುತ್ತಾರೆ. ಇದೀಗ ಪಾರ್ಥಿವ್ ಪಟೇಲ್ ಅವರ ಜನ್ಮದಿನಕ್ಕಾಗಿ ಛೋಟಾ ಶಕ್ತಿಮಾನ್ ಫೋಟೋ ಹಾಕಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರ ಪಾರ್ಥಿವ್ ಪಟೇಲ್ ಅವರ 32ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಸೆಹ್ವಾಗ್ ಗೆಳೆಯನಿಗೆ ತಮಾಷೆಯಾಗಿ ಶುಭಾಶಯ ಹೇಳಿದ್ದಾರೆ.
ಮೊದಲು ಶಕ್ತಿಮಾನ್ ವೇಷಧಾರಿ ಬಾಲಕನೊಬ್ಬನ ಚಿತ್ರವನ್ನು ಪ್ರಕಟಿಸಿ ಅದರ ಕೆಳಗಡೆ ಛೋಟಾ ಚೇತನ್ ಪಾರ್ಥಿವ್ ಗೆ ಹುಟ್ಟು ಹಬ್ಬದ ಶುಭಾಶಯಗಳು, ಯಾವಾಗಲೂ ಬೆಳಗುತ್ತಲೇ ಇರು. ನೀನು ಟೀಂ ಇಂಡಿಯಾದ 19 ವಯೋಮಿತಿಯೊಳಗಿನ ತಂಡದ ಶಾಶ್ವತ ಆಟಗಾರ ಎಂದು ಕಾಲೆಳೆದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.