ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಸೆತಗಳನ್ನು ಎದುರಿಸಲು ನನಗೆ ಭಯ ಇಲ್ಲ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳ ಮೂರು ಇನ್ನಿಂಗ್ಸ್ ನಲ್ಲಿ ಅಶ್ವಿನ್ ಅವರ ಬೌಲಿಂಗ್ ನಲ್ಲಿ ವಾರ್ನರ್ ಔಟ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್ ನಾನು ಅಶ್ವಿನ್ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದರು.
ಟೆಸ್ಟ್ ನಲ್ಲಿ ಇಲ್ಲಿಯವರೆಗೂ ವಾರ್ನರ್ ಒಂಭತ್ತು ಬಾರಿ ಅಶ್ವಿನ್ ಎಸೆತದಲ್ಲಿ ಔಟಾಗಿದ್ದಾರೆ. ವಾರ್ನರ್ ಬೌಲರ್ ಒಬ್ಬನಿಗೆ ಇಷ್ಟು ಬಾರಿ ಔಟ್ ಆಗಿರುವುದು ಅಶ್ವಿನ್ ಗೆ ಮಾತ್ರ.