ನವದೆಹಲಿ: ಪುಣೆ ಪಿಚ್ ಅತ್ಯುತ್ತಮ ಕಳಪೆ ಪಿಚ್ ಎಂದು ಹೇಳಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇದೀಗ ಬೆಂಗಳೂರು ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಶ್ರೇಷ್ಠ ಪಿಚ್ ಎಂದು ಹೇಳಿದೆ.
ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದದ್ದು ಈ ಪಂದ್ಯ ಸಹ ಪುಣೆ ಟೆಸ್ಟ್ ನಂತೆ ಕಡಿಮೆ ದಿನದಲ್ಲೇ ಪಂದ್ಯ ಅಂತ್ಯ ಕಂಡಿತ್ತು. ಇದರಿಂದ ಚಿನ್ನಸ್ವಾಮಿ ಪಿಚ್ ಕೂಡ ಕಳಪೆ ಎನ್ನಿಸಿಕೊಳ್ಳಲಿದೆಯೇ ಎಂಬ ಅನುಮಾನದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆದಿದ್ದು ಈ ಪಂದ್ಯ ಮೂರನೇ ದಿನಕ್ಕೆ ಅಂತ್ಯಕಂಡಿತ್ತು. ಇದರಿಂದ ಐಸಿಸಿ ಕಳಪೆ ಪಿಚ್ ಎಂದು ಛೀಮಾರಿ ಹಾಕಿತ್ತು.
ಐಸಿಸಿಯಲ್ಲಿ ಪಿಚ್ ಗುಣಮಟ್ಟ ನಿರ್ಧರಿಸಲು ಕೆಲವು ದರ್ಜೆಗಳಿವೆ. ಅತಿಶ್ರೇಷ್ಠ, ಶ್ರೇಷ್ಠ, ಉತ್ತಮ, ಸರಾಸರಿ, ಸರಾಸರಿಗಿಂತ ಕಡಿಮೆ, ಕಳಪೆ ಮತ್ತು ಅನರ್ಹ ಈ ವಿಭಾಗಗಳಲ್ಲಿ ಬೆಂಗಳೂರು ಪಿಚ್ 2ನೇ ಸ್ಥಾನ ಪಡೆದು ಗೌರವ ಗಳಿಸಿದೆ.