ಕ್ರಿಕೆಟ್

ತಕ್ಷಣದಿಂದಲೇ ಜಾರಿ ಬರುವಂತೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ದಿಢೀರ್ ರಾಜಿನಾಮೆ

Shilpa D
ನವದೆಹಲಿ:  ಮಹತ್ವದ ಬೆಳವಣಿಗೆಯೊಂದರಲ್ಲಿ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ತಮ್ಮ ಹುದ್ದೆಗೆ  ರಾಜಿನಾಮೆ ನೀಡಿ ಆಘಾತವನ್ನುಂಟು ಮಾಡಿದ್ದಾರೆ. 
ಐಸಿಸಿಯ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ 59 ವರ್ಷದ ಶಶಾಂಕ್ ಮನೋಹರ್ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ನಾಗಪುರ ಮೂಲದ ವೃತ್ತಿಯಲ್ಲಿ ವಕೀಲರಾಗಿದ್ದ ಶಶಾಂಕ್ ಮನೋಹರ್ ಎರಡು ವರ್ಷಗಳ ಹಿಂದೆ ಮೇ ತಿಂಗಳಲ್ಲಿ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ತಮ್ಮ ಕಡಿಮೆ ಅಧಿಕಾರವಧಿಯಲ್ಲೇ ಒಂದೇ ಕಡೆ ಅಧಿಕಾರ ಕೇಂದ್ರೀಕರಣವಾಗುವುದನ್ನು ಶಶಾಂಕ್ ಮನೋಹರ್ ತಪ್ಪಿಸಿದ್ದರು.
ಐಸಿಸಿ ಸಿಇಓ ಡೇವಿಡ್ ರಿಚರ್ಡ್ ಸನ್ ಗೆ ರಾಜಿನಾಮೆ ಪತ್ರ ಸಲ್ಲಿಸಿದ್ದು, ಮಂಡಳಿಯ ಘನತೆಯನ್ನು ಎತ್ತಿ ಹಿಡಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ನ್ಯಾಯೋಚಿತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಮಂಡಳಿ ಕಾರ್ಯನಿರ್ವಹಿಸುವಲ್ಲಿ ನಾನು ಪ್ರಯತ್ನಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣದಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಐಸಿಸಿ ಮತ್ತಷ್ಟು ಹೆಚ್ಚಿನ ರೀತಿಯ ಸಾಧನೆ ಮಾಡಲಿ ಎಂದು ಹೇಳಿದ್ದಾರೆ.
SCROLL FOR NEXT