ಅಶ್ವಿನ್‌ಗೆ ಔಟಾಗಲ್ಲ ಎಂದು ಹೇಳಿ ಮಾತು ಉಳಿಸಿಕೊಂಡ ವಾರ್ನರ್; ಸಿಲ್ಲಿ ಎಂದ ಟ್ವೀಟರಿಗರು
ಅತೀ ಹೆಚ್ಚು ಬಾರಿ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಔಟಾಗಲ್ಲ ಎಂದು ಹೇಳಿದ್ದ ಡೇವಿಡ್ ವಾರ್ನರ್ ಮಾತು ಉಳಿಸಿಕೊಂಡಿದ್ದಾರೆ...
ರಾಂಚಿ: ಅತೀ ಹೆಚ್ಚು ಬಾರಿ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಔಟಾಗಲ್ಲ ಎಂದು ಹೇಳಿದ್ದ ಡೇವಿಡ್ ವಾರ್ನರ್ ಮಾತು ಉಳಿಸಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ಅಶ್ವಿನ್ ಬೇಟೆ ಎಂದು ತಮಾಷೆ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಇನ್ನುಂದೆ ನಾನು ಅಶ್ವಿನ್ ಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ಹೇಳಿದ್ದ ಡೇವಿಡ್ ವಾರ್ನರ್ ರವೀಂದ್ರ ಜಡೇಜಾಗೆ ಔಟಾಗಿದ್ದಾರೆ.
ಇದಕ್ಕೆ ಟ್ವೀಟರಿಗರು ಯದ್ವಾ ತದ್ವಾ ತಮಾಷೆ ಮಾಡುತ್ತಿದ್ದಾರೆ. ವಾರ್ನರ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಬಿಡಿ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. ಅಲ್ಲದೆ ಸ್ಪಿನ್ನರ್ ಗಳನ್ನು ಎದುರಿಸಲು ವಾರ್ನರ್ ತಡಕಾಡುತ್ತಾರೆ ಎಂದು ಗೇಲಿ ಮಾಡಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಜಡೇಜಾಗೆ ಸುಲಭ ತುತ್ತಾಗಿದ್ದಾರೆ. ಜಡೇಜಾ ಎಸೆತ ಚೆಂಡನ್ನು ನೇರವಾಗಿ ಜಡೇಜಾರ ಕೈಗೆ ನೀಡಿ ಔಟಾಗಿದ್ದು ತಮಾಷೆಯ ವಿಷಯವಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.