ಕ್ರಿಕೆಟ್

ಕ್ರಿಕೆಟ್ ಅಂಗಳದಲ್ಲೇ ಹೊಡೆದಾಡಿದ ಕ್ರಿಕೆಟಿಗರು; ವಿಡಿಯೋ ವೈರಲ್

Srinivasamurthy VN

ಸಿಡ್ನಿ: ಎಂಸಿಸಿ ನೂತನ ಕ್ರಿಕೆಟ್ ನಡಾವಳಿಗಳನ್ನು ಜಾರಿಗೆ ತಂದ ಬೆನ್ನಲ್ಲೇ ಕ್ರಿಕೆಟಿಗರು ಮೈದಾನದಲ್ಲೇ ಹೊಡೆದಾಡಿದ ಕೆಟ್ಟ ಘಟನೆ ದಾಖಲಾಗಿದೆ.

ಆಸ್ಟ್ರೇಲಿಯಾದ ದೇಶೀ ಕ್ರಿಕೆಟ್ ಸರಣಿ ವೇಳೆ ಇಂತಹುದೊಂದು ಘಟನೆ ನಡೆದಿದ್ದು, ಯಕ್ಕಂಡಾಂಡ್ಹ ತಂಡದ ಬೌಲರ್ ಹಾಗೂ ಎಸ್ಕಡಲೆ ತಂಡದ ಬ್ಯಾಟ್ಸಮನ್ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಯಕ್ಕಂಡಾಂಡ್ಹ ತಂಡದ ಬೌಲರ್  ಮಿಕ್ ವಾಕರ್ ಎಸ್ಕಡಲೆ ತಂಡದ ಬ್ಯಾಟ್ಸಮನ್ ಜೇ ಹಾಡ್ಕಿನ್ ರನ್ನು ಬೋಲ್ಡ್ ಮಾಡಿ ಅವರತ್ತ ಧಾವಿಸಿ ಆವೇಶ ಭರಿತರಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಬ್ಯಾಟ್ಸಮನ್ ಅವರನ್ನು ಭುಜ ಮೂಲಕ ತಳ್ಳಿ ಕೆಳಕ್ಕೆ ಬೀಳಿಸಿದರು. ಈ ವೇಳೆ ಸಹ  ಆಟಾಗರ ಡ್ಯಾನಿ ಅಟ್ವೆಲ್ ಬ್ಯಾಟ್ಸಮನ್ ವಿರುದ್ಧ ಆಕ್ರೋಶಗೊಂಡು ಆತನನ್ನು ತಳ್ಳಾಡಿದ್ದಾನೆ.

ಈ ವೇಳೆ ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಅರಿತ ಸಹ ಆಟಗಾರರು ಮಧ್ಯ ಪ್ರವೇಶಿಸಿ ಉಭಯ ಆಟಗಾರರನ್ನು ಸಮಾಧಾನ ಪಡಿಸಿದ್ದಾರೆ.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಬೌಲರ್ ಗೆ ನಾಲ್ಕುವಾರಗಳ ನಿಷೇಧ ಹೇರಿದ್ದರೆ, ಕಾದಾಟ ನಡೆಸಿದ ಬ್ಯಾಟ್ಸಮನ್ ಹಾಗೂ ಫೀಲ್ಡರ್ ಗೆ ಮುಂದಿನ ಜನವರಿ ವರೆಗೂ ನಿಷೇಧ ಹೇರಿದೆ.  ಅಲ್ಲದೆ ಜನವರಿಯ ಬಳಿಕ ಉಭಯ ಆಟಗಾರರ ಕ್ರಿಕೆಟ್ ಭವಿಷ್ಯ ನಿರ್ಧರಿಸುವುದಾಗಿ ಎಚ್ಚರಿಕೆ ನೀಡಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಇತ್ತೀಚೆಗಷ್ಟೇ ಮರಿಲ್ ಬೋನ್ ಕ್ರಿಕೆಟ್ ಸಂಸ್ಥೆ ನೂತನ ನಡವಾಳಿಗಳನ್ನು ಜಾರಿಗೆ ತಂದಿತ್ತು. ಅದರಂತೆ ಕ್ರಿಕೆಟ್ ಅಂಗಳದಲ್ಲಿ ಅಸಭ್ಯ ವರ್ತನೆ ತೋರುವ ಆಟಗಾರರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಿತ್ತು. ಇದರ  ಬೆನ್ನಲ್ಲೇ ಈ ಘಟನೆ ನಡೆದಿರುವುದು ಕ್ರಿಕೆಟ್ ತಜ್ಞರ ಆತಂಕಕ್ಕೆ ಕಾರಣವಾಗಿದೆ.
SCROLL FOR NEXT