ಕರಾಚಿ: ಕ್ರಿಕೆಟ್ ಆಟಗಾರರು ಕಳ್ಳಾಟದಲ್ಲಿ ಭಾಗವಹಿಸುವುದನ್ನು ತಡೆಯಬೇಕಾದರೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಳಿದ್ದಾರೆ.
ಮೋಸದಾಟದಲ್ಲಿ ಭಾಗವಹಿಸಿದ ಆಟಗಾರರ ಬಗ್ಗೆ ಮೃಧು ಧೋರಣೆ ತಳೆಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡುವುದರಿಂದ ಮ್ಯಾಚ್ ಫಿಕ್ಸಿಂಗ್ ಗೆ ಕಡಿವಾಣ ಹಾಕಲು ಸಾಧ್ಯವಾಗಹಬುದು ಎಂದು ಹೇಳಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಕಳ್ಳಾಟ ನಡೆದಿದೆ ಎಂಬ ಆರೋಪದಡಿ ಈಗಾಗಲೇ ನಾಲ್ವರು ಆಟಗಾರರನ್ನು ಪಿಸಿಬಿ ಅಮಾನುತು ಮಾಡಿದೆ. ಈ ಹಿನ್ನೆಲೆಯಲ್ಲಿ ಜಾವೇದ್ ಮಿಯಾಂದಾದ್ ಈ ರೀತಿ ಹೇಳಿದ್ದಾರೆ.