ಕ್ರಿಕೆಟ್

"ದಿ ವಾಲ್" ರಾಹುಲ್ ದ್ರಾವಿಡ್ ದಾಖಲೆ ಮುರಿದ ಪೂಜಾರಾ!

Srinivasamurthy VN

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ನಲ್ಲಿ ಭಾರತದ ಪಾರುಪತ್ಯ ಮುಂದುವರೆದಿದ್ದು, ಭಾರತದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದ ಚೇತೇಶ್ವರ ಪೂಜಾರ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 525 ಎಸೆತಗಳನ್ನು ಎದುರಿಸಿರುವ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಒಟ್ಟು 525 ಎಸೆತಗಳನ್ನು  ಎದುರಿಸಿ  ಸುದೀರ್ಘ ಇನ್ನಿಂಗ್ಸ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗೆ ಎಂಬ ಕೀರ್ತಿಗೆ ಪೂಜಾರ ಭಾಜನರಾಗಿದ್ದಾರೆ. ಈ ಹಿಂದೆ "ದಿ ವಾಲ್" ಖ್ಯಾತಿಯ ರಾಹುಲ್ ದ್ರಾವಿಡ್ ಹೆಸರಿನಲ್ಲಿ ಈ ದಾಖಲೆ ಇತ್ತು. 2004ರಲ್ಲಿ ಪಾಕಿಸ್ತಾನದ  ವಿರುದ್ಧ ರಾಹುಲ್ ದ್ರಾವಿಡ್ 495 ಎಸೆತಗಳನ್ನು ಎದುರಿಸಿದ್ದರು.

ಇದು ಈ ವರೆಗೆ ಭಾರತೀಯ ಕ್ರಿಕೆಟ್ ಆಟಗಾರನ ಸುದೀರ್ಘ ಇನ್ನಿಂಗ್ಸ್ ಎಂದು ದಾಖಲಾಗಿತ್ತು. ಆದರೆ ಇದೀಗ ಪೂಜಾರ ಅದನ್ನೂ ಮೀರಿದ ಇನ್ನಿಂಗ್ಸ್ ಆಡಿದ್ದು, ಟೀಂ ಇಂಡಿಯಾದ ಎರಡನೇ ವಾಲ್ ಎಂಬ ಖ್ಯಾತಿಗೆ  ಹತ್ತಿರವಾಗುತ್ತಿದ್ದಾರೆ. ಅಂತೆಯೇ ಈ ಸುದೀರ್ಘ ಇನ್ನಿಂಗ್ಸ್ ಮೂಲಕ ಅತೀ ಹೆಚ್ಚು ಎಸೆತಗಳನ್ನು ಎದುರಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ಪೂಜಾರಾ ಭಾಜನರಾಗಿದ್ದಾರೆ.

ದ್ವಿಶತಕದಲ್ಲೂ ಪೂಜಾರ ದಾಖಲೆ!
ಇನ್ನು ಈ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಪೂಜಾರಾಗೆ ಇದು ವೃತ್ತಿ ಜೀವನದ ಮೂರನೇ ದ್ವಿಶತಕವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸುವ ಮೂಲಕ ಪೂಜಾರ ಗ್ರೇಮ್ ಪೊಲ್ಲಾಕ್, ಸಚಿನ್  ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯನ್ನು ಮುರಿದಿದ್ದಾರೆ.

SCROLL FOR NEXT