ಸಚಿನ್ ತೆಂಡೂಲ್ಕರ್ 
ಕ್ರಿಕೆಟ್

ಬಾಂಗ್ಲಾ ವಿರುದ್ಧ ಹೀನಾಯ ಸೋಲು: 2007ರ ವಿಶ್ವಕಪ್ ವೇಳೆ ಸಚಿನ್ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದರಂತೆ!

2007ರ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಂದಿತ್ತು...

ನವದೆಹಲಿ: 2007ರ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಂದಿತ್ತು. ಈ ಅವಮಾನದಿಂದಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಲು ಯೋಚಿಸಿದ್ದರಂತೆ ಹಾಗಂತ ಅವರೇ ಬಹಿರಂಗಪಡಿಸಿದ್ದಾರೆ. 
ಸಚಿನ್ ಅವರ ನಿವೃತ್ತಿ ನಿರ್ಧಾರವನ್ನು ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಂತಕಥೆ ಹಾಗೂ ತಮ್ಮ ಅಚ್ಚುಮೆಚ್ಚಿನ ಮಾಜಿ ಆಟಗಾರ ವಿವ್ ರಿಚರ್ಡ್ಸ್ ತಡೆದಿದ್ದರು. ಅಲ್ಲದೆ ಸ್ಪೂರ್ತಿಯ ಮಾತುಗಳನ್ನು ಆಡಿದ್ದರು ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. 
ವಿಶ್ವಕಪ್ ಟೂರ್ನಿಯ ಹೀನಾಯ ಸೋಲಿನ ಬಳಿಕ ನಾನು ಎರಡು ದಿನಗಳವರೆಗೆ ಹೋಟೆಲ್ ರೂಂನಿಂದ ಆಚೆಗೆ ಬಂದಿರಲಿಲ್ಲ. ಅಷ್ಟೋಂದು ಎದೆಗುಂದಿದ್ದೆ. ಇನ್ನು ಕ್ರಿಕೆಟ್ ಜೀವನ ಮುಂದುವರಿಸಬೇಕಾ ಎಂದು ಆಲೋಚಿಸುತ್ತಿದ್ದೆ. ಈ ಮನಸ್ಥಿತಿಯಿಂದ ಹೊರಬಂದು ಮುಂದಿನ ಟೂರ್ನಿಯ ಬಗ್ಗೆ ಯೋಚನೆ ಮಾಡುವುದೇ ಕಷ್ಟವೆನಿಸಿತ್ತು ಎಂದು ಸಚಿನ್ ತಮ್ಮ ವೃತ್ತಿ ಬದುಕಿನ ಕಠಿಣ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. 
2007 ಮಾರ್ಚ್ 23 ನನ್ನ ಕ್ರೀಡಾ ಜೀವನದ ಪಾಲಿಗೆ ಅತ್ಯಂತ ಕೆಟ್ಟ ದಿನವಾಗಿತ್ತು. ಗೆಲುವಿನ ಬಗ್ಗೆ ಯೋಚಿಸುತ್ತಿರುವಾಗ ಸೋಲು ಎದುರಾದರೆ ನಮ್ಮ ಭಾವನೆ ಅತ್ಯಂತ ಭಯಾನಕವಾಗಿರುತ್ತದೆ. ಬಾಂಗ್ಲಾದೇಶ ವಿರುದ್ಧ ಸೋಲು ಕಾಣುತ್ತೇವೆ ಎಂದು ಅಂದುಕೊಂಡಿರಲಿಲ್ಲ. ನಾವು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಲಿಲ್ಲ. ಆದರೆ ಬಾಂಗ್ಲಾ ವಿರುದ್ಧ ಸೋತು ಸುಣ್ಣವಾಗಿದ್ದೇವು. ಈ ವೇಳೆ ಖಿನ್ನತೆಗೆ ಒಳಗಾಗಿದ್ದ ನನ್ನ ಸ್ಥಿತಿಯನ್ನು ಸ್ನೇಹಿತರ ಮೂಲಕ ತಿಳಿದುಕೊಂಡಿರುವ ರಿಚರ್ಡ್ಸ್ ಅವರೇ ಸ್ವತಃ ದೂರವಾಣಿ ಕರೆ ಮಾಡಿ ನನ್ನ ಆತ್ಮವಿಶ್ವಾಸ ತುಂಬಿದರು ಎಂದು ಸಚಿನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್